ಚಳ್ಳಕೆರೆ :
ಚಳ್ಳಕೆರೆ: ಶಾಲೆಯನ್ನೆ ಪ್ರಯೋಗಾಲಯ ಮಾಡಿದ ಶಿಕ್ಷಕ
ಚಳ್ಳಕೆರೆಯ ತಿಪ್ಪಾರೆಡ್ಡಿ ಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ
ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಹೆಚ್ಚಿಸಲು ವಿಜ್ಞಾನ ಮತ್ತು ಗಣಿತ
ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಇಲ್ಲಿ ಸೌರಮಂಡಲ,
ಮಾನವ ದೇಹದ ಅಂಗಾಂಗಗಳ ಪರಿಕರಗಳು, ಗಣಿತ ಅಧ್ಯಯನಕ್ಕೆ
ಕೋನ, ತ್ರಿಕೋನ, ಷಟ್ಟುಜಗಳ ಸಾಧನಗಳು ಲಭ್ಯವಿವೆ. ಶಿಕ್ಷಕ
ಶ್ರೀನಿವಾಸ್ ಅವರ ಪ್ರಯತ್ನದಿಂದ ಐದು ಸಾವಿರ ಪುಸ್ತಕಗಳ
ಗ್ರಂಥಾಲಯವೂ ಇದೆ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳ
ಕಲಿಕೆಗೆ ಅನುಕೂಲವಾಗಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ. ನಗರ
ಪ್ರದೇಶದ ಶಾಲೆಗಳಿಗಿಂತ ಇಲ್ಲಿ ಪೋಷಕರು ಸ್ವಯಂಪ್ರೇರಿತರಾಗಿ
ಮಕ್ಕಳನ್ನು ದಾಖಲಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

