ಚಳ್ಳಕೆರೆ : ಮಳೆಗಾಲದಲ್ಲಿ ನಿಂತ ನೀರು, ಹಾಗೂ ಮನೆಯಲ್ಲಿ ಒಂದು ವಾರಗಳ ಕಾಲ ಶೇಖರಣೆ ಮಾಡಿರುವ ನೀರಿನಲ್ಲಿ ಲಾರ್ವ ಉತ್ಪತ್ತಿ ಮೂಲಕ ಸೊಳ್ಳೆಗಳ ತಾಣವಾಗಿ ಡೆಂಗ್ಯೂ ಮಲೇರಿಯಾ ಎಂಬ ಖಾಯಿಲೆಗಳಿಗೆ ಮನುಷ್ಯ ಒಳಗಾಗುತ್ತಾನೆ ಆದ್ದರಿಂದ ಸಾರ್ವಜನಿಕರು ನೀರನ್ನು ಶೇಖರಿಸುವುದು , ತೆರೆದ ಗುಂಡಿಗಳನ್ನು ಮುಚ್ಚಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಸಹಾಯಕ ಅಧಿಕಾರಿ ಕುದಾಪುರ ತಿಪ್ಪೇಸ್ವಾಮಿ ಹೇಳಿದರು.
ಅವರು ತಾಲೂಕಿನ ಚೆನ್ನಾಗನಹಳ್ಳಿ ಗ್ರಾಮದ ಲಂಬಾಣಿಹಟ್ಟಿಯಲ್ಲಿ ಲಾರ್ವ ಸಮೀಕ್ಷೆಗೆ ಕೊಂಡೊಯ್ದಿದ್ದ 11 ಸ್ಯಾಂಪಲ್ಗಳಲ್ಲಿ ಮೂರು ಪಾಸಿಟಿವ್ ಬಂದಿರುವುದು ಡೆಂಗ್ಯೂ ಹಾಗೂ ಚಿಕ್ಕನ್ ಗುನ್ಯಾ ಪತ್ತೆಯಾಗಿರುವುದು ಕಂಡು ಬಂದಿದೆ.
ಆದ್ದರಿಂದ ಸಾರ್ವಜನಿಕರು ಸೊಳ್ಳೆಗಳ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕು, ಉತ್ಪತ್ತಿ ತಾಣವಾಗದೆ ತಮ್ಮ ಮನೆಯ ಸುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಒಂದು ವಾರಗಳ ಕಾಲ ನೀರನ್ನು ಒಂದೇ ಕಡೆ ಸ್ವೀಕರಿಸದೆ , ಶುಚಿಯಾಗಿಟ್ಟಿರಬೇಕು, ಲಾರ್ವ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಇದರಿಂದ ಮಕ್ಕಳಿಗೆ ವೃದ್ಧರಿಗೆ ಸೊಳ್ಳೆಗಳ ಕಚ್ಚುವಿಕೆಯಿಂದ ಡೆಂಗ್ಯೂ, ಮಲೇರಿಯ, ಚಿಕನ್ ಗುನ್ಯ ಇಂತಹ ಭಯಾನಕ ಕಾಯಿಲೆಗಳು ಹರಡಿ ಜೀವಕ್ಕೆ ಹಾನಿ ತರುತ್ತವೆ.
ಆದ್ದರಿಂದ ಎಲ್ಲಾ ಸಾರ್ವಜನಿಕರು ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಎಂದು ತಿಳಿಸಿದರು..
ಇದೇ ಸಂದರ್ಭದಲ್ಲಿ ಚೆನ್ನಾಗನಹಳ್ಳಿ ಗ್ರಾಮದ ಲಂಬಾಣಿಹಟ್ಟಿಯಲ್ಲಿ ಫಾಗಿಂಗ್ ಯಂತ್ರದ ಮೂಲಕ ಸೊಳ್ಳೆಗಳನ್ನು ನಿಯಂತ್ರಣ ಗೊಳಿಸಿಕೆ ಕಾರ್ಯ ಮುಂದುವರಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಲೋಕೇಶ್ ನಾಯ್ಕ್, ಗ್ರಾಪಂ. ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ , ಆರೋಗ್ಯ ಇಲಾಖೆಯ ಡಾ ಸುಧಾಕರ್, ಡಾ.ಅಜೇಯ್ ಕುಮಾರ್, ಇತರರು ಪಾಲ್ಗೊಂಡಿದ್ದರು.

