ಚಳ್ಳಕೆರೆ :
ಡಿ.ಪಾರ್ವತಮ್ಮ ಸಹ ಶಿಕ್ಷಕರು ಎಸ್.ಪಿ. ಎಸ್. ಆರ್ ಸಂಯುಕ್ತ ಪದವಿ ಪೂರ್ವ ಕಾಲೇಜು( ಪ್ರೌಢಶಾಲಾ ವಿಭಾಗ ) ರಾಂಪುರ.ಮೊಳಕಾಲ್ಮೂರು ತಾಲ್ಲೂಕು ಇವರ ಸೇವೆಯನ್ನು ಗುರುತಿಸಿ ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಇವರನ್ನು 2025 -26 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ.
ಇವರನ್ನು ಸೆ.5 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಾದ ಡಿ.ಪಾರ್ವತಮ್ಮ ರವರನ್ನು ಶ್ರೀ ಜಟಂಗಿ ರಾಮೇಶ್ವರ ವಿದ್ಯಾಭಿ ವೃದ್ಧಿ ಸಂಘದ ಅಧ್ಯಕ್ಷ ಬಿ.ಪಿ ಜಯಪ್ರಕಾಶ್, ಕಾರ್ಯದರ್ಶಿ ಬಿ. ಎಚ್. ಶಂಕರ್ ರೆಡ್ಡಿ, ಸಹ ಕಾರ್ಯದರ್ಶಿ ನಾಗರೆಡ್ಡಿ, ಪ್ರೌಢಶಾಲಾ ವಿಭಾಗದ ಅಧ್ಯಕ್ಷ ಶ್ರೀಕಾಂತ ರೆಡ್ಡಿ, ಕೋಶದ್ಯಾಕ್ಷ ಗಂಗಾಧರಪ್ಪ, ಸಹ ಶಿಕ್ಷಕರುಗಳಾದ ಅಶೋಕ್,ರವಿ,ಶಿವರಾಜ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ತಿಮಣ್ಣ ಹಾಗೂ ಸಿಬ್ಬಂದಿ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಅಭಿನಂದಿಸಿದ್ದಾರೆ

