“ಶ್ರೀಶಾರದಾಶ್ರಮದ ಸದ್ಭಕ್ತರಿಂದ ಶಿವನಗರದ ಗಣಪತಿ ಸನ್ನಿಧಿಯಲ್ಲಿ ವಿಶೇಷ ಭಜನೆ”.
ಚಳ್ಳಕೆರೆ:-ನಗರದ ಶಿವನಗರದಲ್ಲಿ ಶ್ರೀಶಿವನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೂರಿಸಿರುವ ಮೂರನೇ ವರ್ಷದ ಶ್ರೀಗಣಪತಿ ದೇವರ ಸನ್ನಿಧಿಯಲ್ಲಿ ಚಳ್ಳಕೆರೆ ಶ್ರೀಶಾರದಾಶ್ರಮದ ಸದ್ಭಕ್ತರಿಂದ "ಸಾಮೂಹಿಕ ವಿಶೇಷ ಭಜನಾ ಕಾರ್ಯಕ್ರಮ" ನಡೆಯಿತು.
ಈ ಭಜನಾ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ,ಶುಭ ಸುರೇಶ್ ,ಜಿ ಯಶೋಧಾ ಪ್ರಕಾಶ್, ಶಾಂತಮ್ಮ, ಯತೀಶ್ ಎಂ ಸಿದ್ದಾಪುರ,ಜಿ.ವಿ.ಎಸ್ ಪ್ರಕಾಶ್, ಮಂಗಳಾ, ಎಂ ಗೀತಾ ನಾಗರಾಜ್, ಪ್ರೇಮಲೀಲಾ,ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ವನಜಾಕ್ಷಿ ಮೋಹನ್,ಕೆ.ಎಸ್ ವೀಣಾ,ಪಂಕಜ, ಭಾಗ್ಯಲಕ್ಷ್ಮೀ , ವಿಜಯಲಕ್ಷ್ಮೀ, ವೀರಮ್ಮ, ದ್ರಾಕ್ಷಾಯಣಿ, ಶ್ವೇತ,ರಶ್ಮಿ,ಶೈಲಜ, ಕೃಷ್ಣವೇಣಿ, ಸಂಗೀತ, ಕೆ.ಪಿ.ನಾಗಭೂಷಣಶೆಟ್ಟಿ,ಬಾಬು, ಕೆ.ಸಿ.ವೀರೇಶ್ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರಿದ್ದರು.

