ಚಳ್ಳಕೆರೆ :
ಚಿತ್ರದುರ್ಗ: ಗಮನ ಸೆಳೆದ ಮಹಿಳಾ ನೌಕರರ ನೃತ್ಯ
ಚಿತ್ರದುರ್ಗ ನಗರದಲ್ಲಿ ವಿವಿಧ ಕಚೇರಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ
ಗಣೇಶ ಮೂರ್ತಿಗಳ ವಿಸರ್ಜನೆ ವಿಜೃಂಭಣೆಯಿಂದ ನಡೆಯುತ್ತಿದೆ.
ಬೆಸ್ಕಾಂ ಕಚೇರಿಯ ಗಣೇಶ ಮೂರ್ತಿಯ ವಿಸರ್ಜನಾ
ಕಾರ್ಯಕ್ರಮವು ಜೋರಾಗಿತ್ತು. ಗಣೇಶನನ್ನು ಮೆರವಣಿಗೆ ಮೂಲಕ
ನಗರದ ಪ್ರಮುಖ ರಸ್ತೆಗಳಲ್ಲಿ ಕರೆದೊಯ್ಯಲಾಗುತ್ತಿದ್ದು, ಈ
ಮೆರವಣಿಗೆಯಲ್ಲಿ ಮಹಿಳಾ ನೌಕರರು ಡಿಸಿ ಕಚೇರಿ ಬಳಿ ವಾದ್ಯಗಳ
ತಾಳಕ್ಕೆ ತಕ್ಕಂತೆ ಅತ್ಯುತ್ತಮ ಹೆಜ್ಜೆಗಳನ್ನು ಹಾಕುವ ಮೂಲಕ ಗಮನ
ಸೆಳೆದರು. ತಮ್ಮ ಕುಣಿತದ ಮೂಲಕ ತಾವು ಏನೂ ಕಡಿಮೆಯಿಲ್ಲ
ಎಂದು ಅವರು ತೋರಿಸಿಕೊಟ್ಟರು.

