ಚಳ್ಳಕೆರೆ :
ಚಿತ್ರದುರ್ಗ: ಡಿಜೆ ನಿಷೇಧ ಜನಾಭಿಪ್ರಾಯದ
ವಿರುದ್ಧವಾಗಿದೆ
ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ
ನಿಷೇಧಿಸಿರುವ ಸರ್ಕಾರದ ಆದೇಶವು ಜನ ಅಭಿಪ್ರಾಯದ
ವಿರುದ್ಧವಾಗಿದೆ ಎಂದು ಮಾದರ ಗುರುಪೀಠದ ಶ್ರೀ ಬಸವಮೂರ್ತಿ
ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ
ಜನ ಅಭಿಪ್ರಾಯದ ವಿರುದ್ಧ ತೀರ್ಮಾನ ತೆಗೆದುಕೊಳ್ಳಬಾರದು,
ವಿಶೇಷವಾಗಿ ಧಾರ್ಮಿಕ ಆಚರಣೆ ಮೆರವಣಿಗೆ ಮೇಲೆ ಈ ರೀತಿಯ
ನಿರ್ಬಂಧ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಗಣಪತಿ
ಪ್ರತಿಷ್ಠಾಪನೆ ನಂತರ ಸರ್ಕಾರಕ್ಕೆ ಮನವಿ ಸಲ್ಲಿಸಲು ಚಿಂತನೆ
ನಡೆದಿದೆ ಎಂದೂ ಅವರು ತಿಳಿಸಿದರು.

