ಚಳ್ಳಕೆರೆ :
ಹಿರಿಯೂರು: ನಗರಸಭೆಯಲ್ಲಿ ಯಾವುದೇ ಆದೇಶಕ್ಕೆ
ಕಿಮ್ಮತ್ತಿಲ್ಲ
ಹಿರಿಯೂರು ನಗರಸಭೆ ಆಯುಕ್ತರು ಮೇ ತಿಂಗಳಲ್ಲಿ ನಡೆದ ಟಾಸ್ಕ
ಫೋರ್ಸ್ ಸಮಿತಿ ನಿರ್ಣಯದಂತೆ ಚಂದ್ರಾ ಲೇಔಟ್ ರಸ್ತೆ ಒತ್ತುವರಿ
ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ ಎಂದು ನಾಗರೀಕ ಹಿತರಕ್ಷಣಾ
ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ಅಸಮಾಧಾನ
ವ್ಯಕ್ತಪಡಿಸಿದ್ದಾರೆ.
ರಸ್ತೆ ತೆರವುಗೊಳಿಸಲು ಆದೇಶವಾಗಿ ಎರಡು
ತಿಂಗಳು ಕಳೆದರೂ ಯಾವುದೇ ಕ್ರಮವಾಗಿಲ್ಲ. ಈ ಹಿನ್ನೆಲೆಯಲ್ಲಿ,
ಡಿಸಿ ಅವರು ನೆನೆಗುದಿಗೆ ಬಿದ್ದಿರುವ ಈ ಸಮಸ್ಯೆಯನ್ನು ಪರಿಹರಿಸಿ,
ರಸ್ತೆ ತೆರವುಗೊಳಿಸಲು ಮನವಿ ಮಾಡಿದ್ದಾರೆ.

