ಚಳ್ಳಕೆರೆ :
ಚಿತ್ರದುರ್ಗ: ಬರಗೇರಮ್ಮನಿಗೆ ಬಳೆಗಳ ವಿಶೇಷ
ಅಲಂಕಾರ
ಚಿತ್ರದುರ್ಗದಾದ್ಯಂತ ಮಂಗಳವಾರ ಗೌರಿ ಹಬ್ಬವನ್ನು ಸಡಗರದಿಂದ
ಜನತೆ ಆಚರಿಸಿದರು. ಚಿತ್ರದುರ್ಗದ ಶಕ್ತಿ ದೇವತೆ ಬರಗೇರಮ್ಮನಿಗೆ
ಸುಮಾರು 50 ಸಾವಿರ ಬಳೆಗಳ ಬಳಸಿ ಅಲಂಕಾರ ಮಾಡಲಾಗಿತ್ತು.
ಇದೇ ಸಮಯದಲ್ಲಿ ಮಾತಾಡಿದ ಅರ್ಚಕ ಪುನೀತ್, ಗೌರಿ ಹಬ್ಬದ
ದಿನ ಬಳೆಗಳಿಂದಲೇ ದೇವಿ ಸೇರಿ, ದೇವಸ್ಥಾನಕ್ಕೆ ಅಲಂಕರಿಸಿದೆ.
ಒಂದು ತಿಂಗಳಿಂದಲೇ ಈ ಬಗ್ಗೆ ಯೋಜನೆ ರೂಪಿಸಿದ್ದೇವು. ಭಕ್ತರು
ಬಳೆ ತಂದು ಸಹಕರಿಸಿದರು. ಭಕ್ತರು ಬಾಗೀನ ಜೊತೆಗೆ ಚಿನ್ನ ಬೆಳ್ಳಿ
ಅರ್ಪಿಸಿ ದೇವಿ ಕೃಪೆಗೆ ಪಾತ್ರರಾಗುತ್ತಾರೆಂದು ಹೇಳಿದರು.

