filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ಕಳ್ಳತನ ಮಾಡಿದ 96,96,800/- ರೂ ಹಣ ಮತ್ತು
ಈಟಿಯೋಸ್ ಕಾರು ವಶ

ಚಳ್ಳಕೆರೆ :

ಇಪ್ಪತ್ತು ನಾಲ್ಕು ಗಂಟೆಯಲ್ಲಿ ಕಳ್ಳತನ ಶೋಧ

97 ಲಕ್ಷ ಮಾಲಿನ ಜೊತೆ ಆರೋಪಿ ಸೆರೆ

ಚಳ್ಳಕೆರೆ ಪೊಲೀಸರಿಂದ ಕಾರು ಚಾಲಕ ಆರೋಪಿಯ ಬಂಧನ

ಕಳ್ಳತನ ಮಾಡಿದ 96,96,800/- ರೂ ಹಣ ಮತ್ತು
ಈಟಿಯೋಸ್ ಕಾರು ವಶ

ಇನ್ಸ್ಪೆಕ್ಟರ್ ಕೆ.ಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ…

ಡಿವೈಎಸ್ ಪಿ ಬಿಟಿ.ರಾಜಣ್ಣ ಮೆಚ್ಚುಗೆ

ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್
ಕುಮಾರ್‌ ಬಂಡಾರು, ಐಪಿಎಸ್, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ
ಮಾರ್ಗದರ್ಶನದಲ್ಲಿ, ಚಳ್ಳಕೆರೆ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಬಿಟಿ‌‌.ರಾಜಣ್ಣ,
ನಿರೀಕ್ಷಕರಾದ ಕುಮಾರ್ ಕೆ, ಪಿಎಸ್‌ಐ ರವರಾದ ಈರೇಶ್, ಶಿವರಾಜ್,ಜೆ ಹಾಗೂ
ಪತ್ತೆ ತಂಡವು ಇಪ್ಪತ್ತು ನಾಲ್ಕು ಗಂಟೆಗಳಲ್ಲಿ ಪ್ರಕರಣದ ಬೆನ್ನಟ್ಟಿ ಕಳ್ಳನನ್ನು ಪತ್ತೆ ಹಚ್ಚಿ ಹಣದ ಜೊತೆ ಡ್ರೈವರ್ ನನ್ನು ಬಂಧಿಸಿದ್ದಾರೆ.

ಹಣ ಕಳೆದುಕೊಂಡ ವ್ಯಕ್ತಿ
ಕೆ. ವೈ. ಗುರುಪ್ರಸಾದ್ ನಿವೃತ್ತ ಸಿಬಿಐ ಎಸ್‌.ಪಿರವರು ತನ್ನ ಹೆಂಡತಿ ಲಲಿತಾ
ರವರೊಂದಿಗೆ ಬಳ್ಳಾರಿಯಲಿ ಅವರ ಜಮೀನನ್ನು ಮಾರಾಟ ಮಾಡಿ ಅದರಿಂದ ಬಂದಂತಹ ಒಟ್ಟು 97,00,000/- ರೂಪಾಯಿ
ಹಣವನ್ನು ಪಡೆದುಕೊಂಡು ಆ ಹಣದೊಂದಿಗೆ KA-51-C-3434 ನೇ ಬಾಡಿಗೆ ಕಾರಿನಲಿ ಹೋಗುವಾಗ ಮದ್ಯಾಹ್ನ ಸುಮಾರು
02-15 ಗಂಟೆಗೆ ಚಳ್ಳಕೆರೆಯ ಉಡುಪಿ ಗಾರ್ಡನ್ ಹೊಟೇಲ್ ನಲ್ಲಿ ಹಣವನ್ನು ಕಾರಿನಲ್ಲಿ ಇಟ್ಟು, ಊಟ ಮಾಡಲು ಹೋಗಿದ್ದು,
ಕಾರಿನ ಚಾಲಕ ರಮೇಶನು ಬೇಗ ಊಟ ಮಾಡಿ ಹೊರಗಡೆ ಹೋಗಿ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಕಾರಿನಲ್ಲಿದ
ಹಣವನ್ನು ಗುರುಪ್ರಸಾದ್ ರ ಕಣ್ ತಪ್ಪಿಸಿ ಕಳ್ಳತನದಲ್ಲಿ ತೆಗೆದುಕೊಂಡು ಹೋದ ಬಗ್ಗೆ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಯಾದ ರಮೇಶ.ವಿ ತಂದೆ ವೆಂಕಟರಮಣಪ್ಪ, ಸುಮಾರು 39 ವರ್ಷ, ಬೆಂಗಳೂರು ನಲ್ಲಿ ಕೆಲಸ ಮಾಡಿಕೊಂಡು ಇರುವ ಈತನ ಸ್ವಂತ ಊರು:
ವಡ್ಪ್ರೆಪಲಿ, ಕುಂದೂರು ಗ್ರಾಮ, ಲೇಪಾಕ್ಷಿ ಮಂಡಲ್ ಸತ್ಯಸಾಯಿ ಜಿಲೆ, ಆಂಧ್ರಪ್ರದೇಶ ರಾಜ್ಯ ಇವನನ್ನು 24 ಗಂಟೆಯೊಳಗೆ ಪತ್ತೆ
ಮಾಡಿ ದಸ್ತಗಿರಿ ಮಾಡಿದ್ದು, ಇವನು ಪಾವಗಡ ತಾಲೂಕ್ ವೀರ್ಲಗೊಂದಿ ಗ್ರಾಮದಲ್ಲಿ, ತನ್ನ ಅಜ್ಜಿಯ ಮನೆಯಲಿ ಬಚ್ಚಿಟ್ಟಿದ
96 ಲಕ್ಷ ಹಣ ಮತ್ತು ಇವನ ಹತ್ತಿರ ಉಳಿದ 96,800 ರೂ ಹಣವನ್ನು ವಶಪಡಿಸಿಕೊಂಡಿದ್ದು, ಉಳಿದ 3200 ರೂ ಹಣವನ್ನು
ಕಾರಿಗೆ ಡೀಸೇಲ್ ಹಾಕಿಸಲು ಖರ್ಚು ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಸದರಿ ಪ್ರಕರಣದಲ್ಲಿ ಒಟ್ಟು 96,96,800 ರೂ
ಹಣವನ್ನು ಅಮಾನತ್ತುಪಡಿಸಿಕೊಂಡು ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ, ಆರೋಪಿಯನ್ನು ಮತ್ತು ಹಣವನ್ನು ಪತ್ತೆ ಮಾಡಲು ಶ್ರಮಿಸಿದ ಚಳ್ಳಕೆರೆ ಪೊಲೀಸ್‌ ಠಾಣೆಯ
ಪೊಲೀಸ್ ನಿರೀಕ್ಷಕರಾದ ಕುಮಾರ್ ಕೆ ,ಪಿಐ ಮತ್ತು ಪಿಎಸ್‌ಐ ರವರಾದ ಈರೇಶ್, ಶಿವರಾಜ್.ಜೆ, ರವಿಕುಮಾರ್ ಬಿ.ವಿ
ಎಎಸ್‌ಐ ಹಾಗೂ ಸಿಬ್ಬಂದಿಯರಾದ ವಸಂತಕುಮಾರ್‌ ಹೆಚ್ ಸಿ, ಮಂಜುನಾಥ ಹೆಚ್ ಸಿ, , ವೆಂಕಟೇಶ ಕೆ ಹೆಚ್ ಸಿ-, ನಾಗರಾಜ ಸಿಹೆಚ್ ಸಿ-1179, ಪರಶುರಾಮ ಪಿಸಿ, ಶ್ರೀಧರ ವಸಂತ ಧರೆಣ್ಯವ‌, ರಮೇಶ್ ಶ್ರೀಧರ್, ಅಶೋಕರೆಡ್ಡಿ, ತಿಪ್ಪೇಸ್ವಾಮಿ ತಿಲಕರಾಜ್ , ಶಿವರಾಜ್, ಮಂಜುನಾಥ ಎನ್, ಜೀಪ್ ಚಾಲಕರಾದ ಶ್ರೀನಿವಾಸ್ ಇವರ ಬಗ್ಗೆ ಪೊಲೀಸ್
ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

About The Author

Namma Challakere Local News
error: Content is protected !!