ಚಳ್ಳಕೆರೆ :
ಚಿತ್ರದುರ್ಗ ಅತ್ಯಾಚಾರ ಕೊಲೆ ಪ್ರಕರಣ: ಆರೋಪಿ
ಬಂಧಿಸಿದ ತಂಡಕ್ಕೆ ಎಸ್ಪಿ ಬಹುಮಾನ
ಚಿತ್ರದುರ್ಗದ ಹೊರ ವಲಯದಲ್ಲಿ ನಡೆದ ಅತ್ಯಾಚಾರ ಕೊಲೆ
ಪ್ರಕರಣವನ್ನು 23 ಗಂಟೆಯೊಳಗೆ ಭೇದಿಸಿ, ಆರೋಪಿ ಚೇನತ್ನನ್ನು
ಬಂಧಿಸಿದ ಡಿವೈಎಸ್ಪಿ ದಿನಕರ್ ಮತ್ತು ಪಿಐ ಮುದ್ದರಾಜ್ ನೇತೃತ್ವದ
ಪೊಲೀಸರ ತಂಡಕ್ಕೆ ಗುರುವಾರ ಎಸ್ಪಿ ರಂಜಿತ್ ಕುಮಾರ್
ಬಹುಮಾನ ವಿತರಿಸಿದರು. ಪೊಲೀಸರು ಅರೆಬರೆ ಸುಟ್ಟ ಯುವತಿ
ಶವದ ವಿಳಾಸ ಪತ್ತೆ ಮಾಡಿ, ಆರೋಪಿಯನ್ನು ಬಂಧಿಸಿ ವಿಚಾರಣೆ
ನಡೆಸಿದ್ದಾರೆ. ಈ ಕಾರ್ಯಾಚರಣೆಯನ್ನು ಎಸ್ಪಿ ಶ್ಲಾಘಿಸಿದರು.

