ಚಳ್ಳಕೆರೆ : ಚಿತ್ರದುರ್ಗ ಜಿಲ್ಲಾ ಪಂಚಾಯತ್ ಗೆ ನೂತನವಾಗಿ ಅಧಿಕಾರ ವಹಿಸಿಕೊಂಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಣಧಿಕಾರಿ ಡಾ.ಆಕಾಶ್
ಚಳ್ಳಕೆರೆ ತಾಲೂಕಿಗೆ ದಿಡೀರ್ ಬೇಡಿ, ತಾಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಇನ್ನಿತರೆ ಹಲವು ಗ್ರಾಮ ಪಂಚಾಯತಿಗಳಿಗೆ ಭೇಟಿ ಪರೀಶಿಲನೆ ನಡೆಸಿದರು.

ಮಹಾತ್ಮ ಗಾಂಧಿ ನರೇಗಾ ಕೂಲಿಕಾರ್ಮಿಕ ರೋಟಿಗೆ ಸಂಭಾಷಣೆ ನಡೆಸಿ ಕೂಲಿಕಾರ್ಮಿಕರ ಮೂಲಭೂತ ಸೌಲಭ್ಯಗಳು ಕೂಸಿನ ಮನೆ ಆರೋಗ್ಯ ವಿಮೆ ಹೀಗೆ ಮೂಲಭೂತ ಸೌಕರ್ಯಗಳು ತಲುಪಿದೆಯಾ, ಇಲ್ಲವೇ ಎಂಬುದನ್ನು ಕೂಲಿ ಕಾರ್ಮಿಕರಿಂದ ಮಾಹಿತಿ ಪಡೆದರು.

ಇನ್ನೂ ಸ್ಥಳದಲ್ಲಿ ಇದ್ದ ನರೇಗಾ ಕಾಮಗಾರಿ ಮಾಡುತ್ತಿದ್ದಂತಹ ಮಹಿಳೆಯರನ್ನು ಮಾತನಾಡಿಸಿದ ಸಿಇಒ ಡಾ. ಆಕಾಶ್ ,ನರೇಗಾದಡಿಯಲ್ಲಿ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರು ಇರುವಂತಹ ಎಲ್ಲಾ ಮಹಿಳೆಯರು ಭೀಮಾ ಯೋಜನೆ ಆರೋಗ್ಯ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ನಿಮ್ಮ ಆರೋಗ್ಯ ರಕ್ಷಣೆಗೆ ಇನ್ಸೂರೆನ್ಸ್ ಮೂಲಕ ನಿಮ್ಮ ಕುಟುಂಬಕ್ಕೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು .

ಇದೇ ಸಂದರ್ಭದಲ್ಲಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಎಚ್ ಶಶಿಧರ್ ,ನರೇಗಾ ಸಹಾಯಕ ಅಧಿಕಾರಿ ಸಂತೋಷ್, ಸಂಪತ್ ಕುಮಾರ್ ,ಹಾಗೂ ಪಿ ಡಿ ಓ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕೂಲಿ ಕಾರ್ಮಿಕರು ಹಾಜರಿದ್ದರು.

About The Author

Namma Challakere Local News
error: Content is protected !!