ಚಳ್ಳಕೆರೆ :
ನಗರದಲ್ಲಿ ಬೀದಿ ನಾಯಿಗಳ ಹಾವಳಿಗೆ ಬೇಸತ್ತ ಸಾರ್ವಜನಿಕರ ರಕ್ಷಣೆಗೆ ನಗರಸಭೆ ಮುಂದಾಗಿದ್ದು,
ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸಂಖ್ಯೆ ಕಡಿಮೆ ಮಾಡಲು ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಅತಿ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಶಿಲ್ಪ ಹೇಳಿದರು.
ನಗರದ ನಗರಸಭೆ ಕಚೇರಿಯಲ್ಲಿ ಬುಧವಾರ ಮಾಧ್ಯಮದೊಟ್ಟಿಗೆ
ಮಾತನಾಡುತ್ತ ಈಗಾಲೆ ಬೀದಿನಾಗಳ ಸಂತಾನೋತ್ಪತ್ತಿ ಗೆ ಕಡಿವಾಣ ಹಾಕಲು ಶಸ್ತ್ರ ಚಿಕಿತ್ಸೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶಸ್ತ್ರ ಚಿಕಿತ್ಸೆಗೆ ಕೊಠಡಿ ಸಹ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಉಪಾಧ್ಯಕ್ಷೆ ಕವಿತ. ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿ ಕಾರ್ಜುನ್ ಮಾತನಾಡಿದರು.

