ಚಳ್ಳಕೆರೆ : ಮೇಲ್ಜಾತಿಯಿಂದ ದೌರ್ಜನ್ಯಕ್ಕೆ ಒಳಗಾದಂತಹ ತಾಲೂಕಿನ ಕೊನಿಗರಹಳ್ಳಿ ಹಾಗೂ ದೊಡ್ಡ ಬೀರನಹಳ್ಳಿ ಗ್ರಾಮದ ದಲಿತರಿಗೆ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲವೆಂದು ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಕಳೆದ ಹಲವು ದಿನಗಳಿಂದ ನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಇಂದು ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ಆಗಮಿಸಿ ಧರಣಿ ನಿರತರ ಮನವಿಯನ್ನು ಅವಲೋಕಿಸಿದ್ದಾರೆ.

ಹೌದು ಕಳೆದ ಹತ್ತು ದಿನಗಳಿಂದ ಮಳೆ ಗಾಳಿ ಚಳಿ ಎನ್ನದೆ ತಾಲೂಕು ಕಚೇರಿ ಮುಂಭಾಗದ ದ್ವಾರ ಬಾಗಿಲಲ್ಲಿ ವಿನೂತನವಾಗಿ ಪ್ರತಿಭಟಿಸುವುದರ ಮೂಲಕ ಜಿಲ್ಲಾ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದರು.

ಇದರಿಂದ ಆಗಸ್ಟ್ 15ರಂದು ನಡೆಯುವ 79 ನೇ ಸ್ವಾತಂತ್ರ್ಯ ದಿನಾಚರಣೆಗೆ ಅಡಚಣೆ ಉಂಟಾಗಬಹುದು ಎಂದು ಮನಗಂಡಂತಹ ಜಿಲ್ಲಾಧಿಕಾರಿಗಳು ಕೂಡಲೇ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿ ದ್ದಾರೆ.

ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಟಿಡಿ ರಾಜಗಿರಿ ಮಾತನಾಡಿ ಕಳೆದ ಹತ್ತು ದಿನಗಳಿಂದ ಹೋರಾಟಕ್ಕೆ ಜಿಲ್ಲಾಧಿಕಾರಿಗಳು ಕೇವಲ ಭರವಸೆ ನೀಡಿದರೆ ಸಾಲದು ದಲಿತರ ಹೇಳಿಗೆಗೆ ಮೂಲಭೂತ ಸೌಲಭ್ಯಗಳು ಅತ್ಯಗತ್ಯ, ಆದ್ದರಿಂದ ಈ ಕೂಡಲೇ ಸರ್ಕಾರದ ಮೂಲಕ ದೌರ್ಜನಕ್ಕೆ ಒಳಗಾದಂತಹ ದಲಿತರಿಗೆ ಅತೀ ತುರ್ತಾಗಿ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾಧಿಕಾರಿಯೊಂದಿಗೆ ಒತ್ತಾಯಿಸಿದರು .

ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಹರೀಶ್, ಹಲವು ಮಹಿಳೆಯರು ಪ್ರತಿಭಟನಾಕಾರರು ಧರಣಿ ಸ್ಥಳದಲ್ಲಿ ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!