ಚಳ್ಳಕೆರೆ :
79 ನೇ ಸ್ವಾತಂತ್ರ್ಯ ದಿನೋತ್ಸವವನ್ನು ಸಂಭ್ರಮಿಸಲು ದೇಶಾದ್ಯಂತ ನಡೆಯುತ್ತಿರುವ ‘ಹರ್-ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದಲ್ಲಿ ಸಹಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮನೆ-ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಗೌರವ ಸಲ್ಲಿಸಬೇಕಿದೆ. ಈ ಹಿನ್ನಲೆಯಲ್ಲಿ ಇಂದಿನಿಂದ ಆಗಸ್ಟ್ 15 ರವರೆಗೂ ಪ್ರತಿ ಮನೆ ಮನೆಗಳ ಮೇಲೆ ರಾಷ್ಟ್ರ ಧ್ವಜ ರಾರಾಜಿಸಬೇಕಿದೆ. ಇದರಿಂದ ಭಾರತದ ಹಿರಿಮೆ ವಿಶ್ವ ಭೂಪಟದಲ್ಲಿ ಮಿನುಗಬೇಕಿದೆ ಎಂದು ನಾಯಕನಹಟ್ಟಿ ಬಿಜೆಪಿ ಮಂಡಲದ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್ ಹೇಳಿದರು.
ಪಟ್ಟಣದ ಮನೆಗಳಲ್ಲಿ ಹರ್-ಘರ್ ತಿರಂಗ ಅಭಿಯಾನದ ಅಂಗವಾಗಿ ಬಿಜೆಪಿ ಹಮ್ಮಿಕೊಂಡ
79ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಸುಮಾರು 250ಕ್ಕೂ ಹೆಚ್ಚು ರಾಷ್ಟ್ರಧ್ವಜಗಳನ್ನು ವಿತರಿಸಲಾಗಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ನಾಯಕನಹಟ್ಟಿ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್ , ಬಿಜೆಪಿ S T ಮೋರ್ಚಾ ಜಿಲ್ಲಾ ಅದ್ಯಕ್ಷರು ಶಿವಣ್ಣ, ಬಿಜೆಪಿ ರಾಮುಲು ಆಪ್ತ ಸಹಾಯಕರು ಪಾಪೇಶ್ ನಾಯಕ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದ, ಮೂರ್ತಿ , ಮಂಡಲ ಉಪ ಅದ್ಯಕ್ಷರು ಶ್ರೀನಿವಾಸ್, ಮಂಡಲ ಕಾರ್ಯದರ್ಶಿ H V ಪ್ರಕಾಶ್ ರೆಡ್ಡಿ, S T ಮೋರ್ಚಾ ಅಧ್ಯಕ್ಷರು S ನಾಗರಾಜ್ ನಾಯಕನಹಟ್ಟಿ ಮಂಡಲ, ನಾಯಕನಹಟ್ಟಿ ಮಂಡಲ ಯುವ ಮೋರ್ಚಾ ಅಧ್ಯಕ್ಷರು ತ್ರಿಶೂಲ್ ಕುಮಾರ್, ನಗರ ಘಟಕ ಅದ್ಯಕ್ಷರು ನಾಗರಾಜ್ ಜಗನೂರಹಟ್ಟಿ , ಮುಖಂಡರುಗಳಾದ ದೇವರಾಜ್, ಪ್ರೇಮ್ ಕುಮಾರ್ , ಬೋರಣ್ಣ ರಾಧಮ್ಮ , ಶಾಂತ ಕುಮಾರ್, ಬೋರಯ್ಯ, ಪ್ರಹ್ಲಾದ , ಲೋಕೇಶ್ , D B ಮಂಜುನಾಥ, ಎಲ್ಲಾ ಮುಖಂಡರು ಉಪಸ್ಥಿತರಿದ್ದರು ಹಾಗೂ ಕಾರ್ಯಕರ್ತರು ಇದ್ದರು.

