ಆ.26ರಂದು ಗೌರಸಮುದ್ರ ಮಾರಮ್ಮ ಜಾತ್ರೆ ಸಕಲ ಸಿದ್ದತೆಗೆ : ತಹಶಿಲ್ದಾರ್ ರೇಹಾನ್ ಪಾಷ ಸೂಚನೆ

ಚಳ್ಳಕೆರೆ : ಮಧ್ಯ ಕರ್ನಾಟಕದ ಶಕ್ತಿ ದೇವತೆ ಮಾರಮ್ಮದೇವಿ ದೊಡ್ಡ ಜಾತ್ರೆ ಇದೇ ಆ.26ರ ಮಂಗಳವಾರ ನಡೆಯಲಿರುವ ನಿಮಿತ್ತ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಜಾತ್ರೆ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ತಹಶಿಲ್ದಾರ್ ರೇಹಾನ್ ಪಾಷ ತಾಲ್ಲೂಕು ಮಟ್ಟ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು..
ಜಾತ್ರೆಗೆ ಬರುವ ಭಕ್ತರಿಗೆ ಬೀದಿದೀಪ, ಕುಡಿಯುವ ನೀರು, ಸ್ವಚ್ಚತೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಜಾತ್ರೆಯಶಸ್ವಿಯಾಗುವಂತೆ ಅಧಿಕಾರಿಗಳು ಅಗತ್ಯ ಮುಂಜಾಗೃತ ಕ್ರಮ ಕೈಕೊಳ್ಳುವಂತೆ ತಾಕೀತು ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ಮಾತನಾಡಿ ಜಾತ್ರೆ ಮುಗಿಯುವರೆಗೆ ಎಲ್ಲಾ ಕೆಲಸಗಳನ್ನು ಹಾಗೂ ಉಸ್ತೂವಾರಿಯನು ನಮ್ಮ ಗ್ರಾಮ ಪಂಚಾಯಿತಿ ಯಿಂದ ನಡೆಯುತ್ತದೆ , ಇನ್ನೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ,
ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಕುಡಿವ ನೀರಿನ ತೊಂದರೆಯಾಗಬಾರದು. ಇನ್ನು ಸ್ವಚ್ಛತೆ ಮತ್ತು ಕುಡಿವ ನೀರಿನ ಬಗ್ಗೆ ಎಚ್ಚರಿಕೆ ವಹಿಸಬೇಕು, ಡೆಂಗ್ಯೂ ಹಾಗೂ ಇತರೆ ಆರೋಗ್ಯ ಸಲಹೆಗಳು, ಮುಂಜಾಗ್ರತೆ ಇರಬೇಕು, ಬ್ಯಾನರ್ ಮೂಲಕ ಆರೋಗ್ಯ ಸೇವೆ ಲಭ್ಯ ಎಂಬುದು ಗೋಚರಿಸುವಂತೆ ಪ್ಲೆಕ್ಸ್ ಹಾಕಬೇಕು, ಜಾತ್ರೆಗೆ ಬರುವ ಭಕ್ತಾಧಿಗಳು ಹಾಗೂ ಸಾರ್ವಜನಿಕರಿಗೆ ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ಒದಗಿಸುತ್ತಾರೆ ಎಂಬ ಭಾವನೆಯಿಂದ ಜಾತ್ರೆಗೆ ಆಗಮಿಸುತ್ತಾರೆ.

ದೇವಿಯ ದರ್ಶನ ಪಡೆಯಲು ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಕುಡಿಯುವ ನೀರು ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳು ಪೂರ್ಣಪ್ರಮಾಣದಲ್ಲಿ ಆಗಬೇಕು. ಆ ಭಾಗದಲ್ಲಿ ಮಳೆ ಪ್ರಮಾಣ ಇದೆ, ಜಾತ್ರೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳಿಗೆ. ಸಂಬಂಧಪಟ್ಟ ಅಧಿಕಾರಿಗಳು ಅಕ್ಕಪಕ್ಕದ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಕೇಂದ್ರದಿಂದ ಕುಡಿಯುವ ನೀರಿನ ಟ್ಯಾಂಕರನ್ನು ಒದಗಿಸಬೇಕು, ಗ್ರಾಮ ಪಂಚಾಯಿತಿ ಆಡಳಿತ ನೈರ್ಮಲ್ಯ ಶುದ್ದೀಕರಣ ಕಾರ್ಯವನ್ನು ನಿರ್ವಹಿಸಬೇಕು.

ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಇದ್ದು ನೀರಿನ ವ್ಯವಸ್ಥೆ ಮಾಡಬೇಕು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳ ದುರಸ್ಥಿ ಮಾಡಬೇಕು. ಗ್ರಾಮದ ಪ್ರತಿಯೊಂದು ರಸ್ತೆಗೂ ವಿದ್ಯುತ್ ದೀಪ ಅಳವಡಿಸಬೇಕು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ನೀಡುವ ಜೊತೆಗೆ, ಕಳ್ಳಕಾರರ ಮೇಲೆ ನಿಗಾವಹಿಸಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಾಕ್ಸ್ ಮಾಡಿ :
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಾತ್ರೆಯಲ್ಲಿ ಪ್ರಾಣ ಬಲಿ ನಿಷೇದಿಸಿದೆ, ಭಕ್ತರು ಯಾರೂ ಸಹ ಪ್ರಾಣಿ ಬಲಿಗೆ ಪ್ರಯತ್ನ ನಡೆಸಬಾರದು. ಭಕ್ತಾಧಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಪೂರೈಸಲು ಈಗಾಗಲೇ ಸಂಬಂಧಪಟ್ಟ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ವೃತ್ತ ನೀರಿಕ್ಷಕ ಮಂಜುನಾಥ್ ಶಿರೆಹಳ್ಳಿ ಮಾತನಾಡಿ, ಪೊಲೀಸ್ ಇಲಾಖೆ ಶಾಂತಿಯುತ ಜಾತ್ರೆಗೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ, ಜಿಲ್ಲಾ ರಕ್ಷಣಾಧಿಕಾರಿ, ಹೆಚ್ಚುವರಿ ರಕ್ಷಣಾಧಿಕಾರಿಗಳ , ಡಿಐಎಸ್ ಪಿ ಮಾರ್ಗದರ್ಶನದಲ್ಲಿ ಮತ್ತು ಸಿಬ್ಬಂದಿ ವರ್ಗ ಸಂಚಾರ ವ್ಯವಸ್ಥೆಯೂ ಸೇರಿದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವರು, ಜಾತ್ರೆಯಲ್ಲಿ ಬ್ಯಾರಿಕೇಡ್ ಸಮಸ್ಯೆ ಯಾಗದಂತೆ ಇಲಾಖೆ, ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕು, ಸಿಸಿ ಕ್ಯಾಮರ ಅಳವಡಿಸಿಕೊಡಬೇಕು, ಮೊಬೈಲ್ ಟವರ್, ಇನ್ನೂ ಕಳೆದ ಬಾರಿ ಬ್ಯಾರಿಕೇಡ್ ಸಮಸ್ಯೆ ಉಂಟಾಗಿ ಬಾರಿ ಸಮಸ್ಯೆ ತಲೆದೋರಿತ್ತು ಆದ್ದರಿಂದ ಈ ಬಾರಿ ಮುಂಜಾಗ್ರತವಾಗಿ ಸಹಕಾರ ನೀಡಬೇಕು ಎಂದರು.

ಈ ಪೂರ್ವಬಾವಿ ಸಭೆಯಲ್ಲಿ , ಗ್ರಾಮ ಪಂಚಾಯತಿ ಸದಸ್ಯ ಶಶಿಕುಮಾರ್,
ತಹಶೀಲ್ದಾರ್ ರೇಹಾನ್‌ಪಾಷ, ತಾಪಂ.ಕಾರ್ಯನಿರ್ವಾಹಣಾಧಿಕಾರಿ ಇಓ ಶಶಿಧರ್,, ನಗರಸಭೆ ಪೌರಾಯುಕ್ತ ಜಗರೆಡ್ಡಿ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರು,, ಸಮಾಜ ಕಲ್ಯಾಣಾಧಿಕಾರಿಗಳು, ಬಿಸಿಎಂ ಅಧಿಕಾರಿಗಳು, ಲೋಕೋಪಯೋಗಿ ಅಧಿಕಾರಿಗಳು, ತಳಕು ಬೆಸ್ಕಾಂ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇತರರಿದ್ದರು

About The Author

Namma Challakere Local News
error: Content is protected !!