ಚಳ್ಳಕೆರೆ :
ಚಿತ್ರದುರ್ಗ: ರೈತರಿಗೆ ಯೂರಿಯಾ ವಿತರಿಸದ ಕೃಷಿ
ಸಚಿವರನ್ನು ಸಂಪುಟದಿಂದ ಕೈಬಿಡಲು ಆಗ್ರಹ
ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದರು, ರಾಜ್ಯ
ಸರ್ಕಾರ ರೈತರಿಗೆ ಯೂರಿಯಾ ವಿತರಿಸುವಲ್ಲಿ ವಿಫಲವಾಗಿದೆ.
ಗೊಬ್ಬರ ವಿತರಣೆಯಲ್ಲಿ ಸಂಪೂರ್ಣವಾಗಿ ವಿಫಲರಾದ ಕೃಷಿ
ಸಚಿವ ಎನ್. ಚೆಲುವರಾಯಸ್ವಾಮಿಯವರನ್ನು ಸಂಪುಟದಿಂದ
ಕೈಬಿಡಬೇಕೆಂದು ಒತ್ತಾಯಿಸಿ, ರೈತ ಸಂಘದ ಸದಸ್ಯರು
ಚಿತ್ರದುರ್ಗದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ
ಸಲ್ಲಿಸಿದರು. ರೈತರಿಗೆ ರಸಗೊಬ್ಬರ ನೀಡದ ಕೃಷಿ ಸಚಿವರು ತಮ್ಮ
ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದರು.

