ಗುಂತಕೋಲ್ಮನಹಳ್ಳಿ ಊರಿನ ಗ್ರಾಮಸ್ಥಾರ ಸಮ್ಮೂಖದಲ್ಲಿ ಬುಡಕಟ್ಟು ಸಂಸ್ಕೃತಿ ಆಚರಣೆಯಂತೆ ಶ್ರೀ ಆಂಜನೇಯ ಸ್ವಾಮಿಯ ಗರುಡ ಸ್ತಂಭ ಪ್ರತಿಷ್ಠಾಪನೆ
ನಾಯಕನಹಟ್ಟಿ:: ಬುಡಕಟ್ಟು ಜನರ ಸಂಪ್ರದಾಯದಂತೆ ಗುಂತಕೋಲ್ಮನಹಳ್ಳಿ ಗ್ರಾಮದ ಗ್ರಾಮಸ್ಥರ ಸಮ್ಮುಖದಲ್ಲಿ ಆರಾಧ್ಯ ದೈವ ಶ್ರೀ ಆಂಜನೇಯಸ್ವಾಮಿ ನೂತನ ಗರುಡ ಸಂಭ್ತ ಪ್ರತಿಷ್ಠಾಪನೆ ಮಾಡಲಾಗಿತ್ತು
ಹೌದು ಇದು ನಾಯಕನಹಟ್ಟಿಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಗುಂತಕೋಲ್ಮನಹಳ್ಳಿ ಗ್ರಾಮದಲ್ಲಿ ಗುರುವಾರ ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿಸಮಸ್ತ ಊರಿನ ಗ್ತಾಮಸ್ಥಾರ ಸಮ್ಮೂಖದಲ್ಲಿ ನೂತನವಾಗಿ ಗರಡಸ್ತಂಭವನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಗುರುವಾರ ಬೇಳಿಗೆ 9.00 ಗಂಟೆಗೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಆವರಣದಲ್ಲಿ ಬುಡಕಟ್ಟು ಜನರ ದಾರ್ಮಿಕ ಪೂಜ ವಿದಿ ವಿದಾನಗಳೋಂದಿಗೆ ಅದ್ದೂರಿಯಗಿ ಗರಡಸ್ತಂಭ ನೀಲ್ಲಿಸಿ ವಿಶೆಷ ಪೂಜ ಕಾರ್ಯ ನೀರ್ವಾಹಿಸಿ ಪ್ರತಿಷ್ಠಪನೆ ಮಾಡಲಾಯಿತು. ಇದೇ ವೇಳೆ ಗ್ರಾಮದ ಮುಖಂಡ ಬೋರಯ್ಯ ಮಾತನಾಡಿದರು ಗುಂತಕೋಲ್ಮನಹಳ್ಳಿ ಗ್ರಾಮದಲ್ಲಿ ಈ ದಿನ ನೂತನವಾಗಿ ಗರಡಸ್ತಂಭವನ್ನು ಪ್ರತಿಷ್ಠಾಪನೆ ಮಾಡಲಾಯಿತುಗ್ರಾಮದಲ್ಲಿ ಶಾಂತಿ ನೇಮ್ಮದಿ ಈ ಬಾಗದ ರೈತರಿಗೆ ಉತ್ತಮ ಮಳೆ ಬೇಳೆ ಸಂವೃದ್ದಿಯಾಗಿ ಆಗಲಿಯೇಂದರು.
ಶ್ರೀ ಗುರು ತಿಪ್ಪೇರುದ್ರಸ್ವಾಮಿ ರುದ್ರಾಕ್ಷಿಮಾಲಾ ಯುವಕರ ಸಂಘ ಹಾಗೂ ಶ್ರೀ ಮಾರುತಿ ಯುವಕ ಸಂಘ ಸಹಕಾರದೊಂದಿಗೆ ಗರುಡ ಸ್ತಂಭ ಪ್ರತಿಷ್ಠಾಪಿಸಲಾಯಿತು
ಇದೇ ಸಂದರ್ಭದಲ್ಲಿ ಗುಂತಕೋಲ್ಮನಹಳ್ಳಿ ಗ್ರಾಮದ ಗುರು-ಹಿರಿಯರು ಗ್ರಾಮ ಪಂಚಾಯಿತಿ ಹಾಲಿ ಉಪಾಧ್ಯಕ್ಷರು ಸದಸ್ಯರು ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಸದಸ್ಯರುಗಳು ಹಾಗೂ ಸೇರಿದಂತೆ ಗ್ರಾಮದ ಯುವಕರು ವಿದ್ಯಾರ್ಥಿಗಳು ಸೇರಿದಂತೆ ಸಮಸ್ತ ಗುಂತಕೋಲ್ಮನಹಳ್ಳಿ ಗ್ರಾಮಸ್ಥರು ಇದ್ದರು.

