ಚಳ್ಳಕೆರೆ :
ಎಸ್ ಸಿ ಪಿ ಹಾಗೂ ಟಿಎಸ್ ಪಿ
ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸದಂತ ಮತ್ತು ಬ್ಯಾಕಲಾಗ್ ಹುದ್ದೆಗಳನ್ನು ಬರ್ತೀ ಮಾಡುವುದರ ಜೊತೆಗೆ ಒಳಮೀಸಲಾತಿ ಜಾರಿಗೆ ತರುವಂತೆ ದಲಿತ ಸಂಘರ್ಷ ಸಮಿತಿ ಪ್ರೊ //ಬಿ. ಕೃಷ್ಣಪ್ಪ ಸ್ಥಾಪಿತ ಹೆಣ್ಣೂರು ಶ್ರೀನಿವಾಸ ಬಣದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅವರು ನಗರದ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯಗೆ ಆಗಮಿಸಿದ ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಕೆರೆಕೊಂಡಾಪುರ ಪರಮೇಶ್ವರ, ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಹಿರೇಹಳ್ಳಿ ರಾಜಣ್ಣ , ಹೊನ್ನೂರು ಮಾರಣ್ಣ, ದಲಿತಮುಖಂಡ ರಾಮಸ್ವಾಮಿ, ಇನ್ನುಅನೇಕ ಮುಖಂಡರು ಭಾಗವಹಿಸಿದ್ದರು.

