ಚಳ್ಳಕೆರೆ :
ಚಳ್ಳಕೆರೆ: ಕೇಳಿದ್ದು ಹಾಲು ಆದರೆ ಕೊಟ್ಟಿದ್ದು ಹಾಲು
ಕರೆಯುವ ಹಸು
ಚಳ್ಳಕೆರೆಯ ಬನಶ್ರೀ ವೃದ್ಧಾಶ್ರಮಕ್ಕೆ ಶಿಮುಲ್ ನಿರ್ದೇಶಕ ಬಿ.
ಸಿ. ಸಂಜೀವಮೂರ್ತಿ ಇಂದು ಹಸು ಮತ್ತು ಕರು ನೀಡಿದ್ದಾರೆ.
ಆಶ್ರಮದ ವ್ಯವಸ್ಥಾಪಕಿ ಎಸ್. ಮಂಜುಳಮ್ಮ ಆಶ್ರಮಕ್ಕೆ ಬಂದ
ಅತಿಥಿಗಳನ್ನ ಪೂಜೆ ಮಾಡಿ ಬರಮಾಡಿಕೊಂಡರು. ಇದೇ
ಸಮಯದಲ್ಲಿ ಮಾತಾಡಿ, ಬನಶ್ರೀ ಆಶ್ರಮದಲ್ಲಿ ನಡೆದ ವಿಶ್ವಹಾಲು
ದಿನಾಚರಣೆಯಲ್ಲಿ ಶಿಮುಲ್ ನಿರ್ದೇಶಕ ಬಿಸಿ ಸಂಜೀವಮೂರ್ತಿಗೆ
ಬನಶ್ರೀ ಆಶ್ರಮಕ್ಕೆ ಹಾಲು ನೀಡಲು ಮನವಿ ಮಾಡಿದ್ದರು. ಇದಕ್ಕೆ
ಸ್ಪಂದಿಸಿ ಹಾಲು ನೀಡುವ ಬದಲು ವೈಯಕ್ತಿಕವಾಗಿ ಹಾಲು ಕೊಡುವ
ಹಸು ನೀಡಿದ್ದಾರೆ.

