ಚಳ್ಳಕೆರೆ :
ಚಳ್ಳಕೆರೆ: ಮನ್ನೆಕೋಟೆ ಗ್ರಾಪಂ ಇಬ್ಬರು ಪಿಡಿಓ,
ಸಮಸ್ಯೆ ಪರಿಹರಿಸಿ
ಚಳ್ಳಕೆರೆಯ ಮನ್ನೆ ಕೋಟೆ ಗ್ರಾ ಪಂ ಯಲ್ಲಿ ಇಬ್ಬರು ಪಿಡಿಓ ಕರ್ತವ್ಯ
ನಿರ್ವಹಿಸುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ ಎಂದು
ರಾಜ್ಯ ರೈತ ಮುಖಂಡ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಹೇಳಿದರು.
ಮೊನ್ನೆ ಕೋಟೆ ಗ್ರಾ. ಪಂ ಮುಂದೆ ಇಂದು ಪ್ರತಿಭಟನೆ ನಡೆಸಿ
ಮಾತಾಡಿ, ರಜೆ ಹೋಗಿದ್ದ ಪಿಡಿಓ, ಇದೀಗ ಬಂದಿದ್ದಾರೆ. ರಜೆ
ಸಮಯದಲ್ಲಿ ಆಡಳಿತಕ್ಕೆ ಮತ್ತೊಬ್ಬರನ್ನು ನಿಯೋಜಿಸಿದ್ದರು.
ಆದರೆ ಈಗ ರಜೆ ಮೇಲಿದ್ದ ಪಿಡಿಓ ವಾಪಾಸ್ಸು ಬಂದಿದ್ದಾರೆ. ಒಂದೇ
ಜಾಗದಲ್ಲಿ ಇಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾರೆಂದರು.

