ಚಳ್ಳಕೆರೆ :
ಚಿತ್ರದುರ್ಗ: ಸಮರ್ಪಕ ವಿದ್ಯುತ್ ಗಾಗಿ ರೈತರ
ಪ್ರತಿಭಟನೆ
ಚಿತ್ರದುರ್ಗದ ಬೆಸ್ಕಾಂ ಅಧಿಕಾರಿಗಳು 3ಗಂಟೆ ವಿದ್ಯುತ್
ಕೊಡುತ್ತಿಲ್ಲವೆಂದು ಆರೋಪಿಸಿ, ರೈತ ಸಂಘದ ಸದಸ್ಯರು
ಇಂದು ಬೆಸ್ಕಾಂ ಇಇ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗೋನೂರು 4 ಫೀಡರ್ ನಿಂದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ವಿದ್ಯುತ್
ಸರಬರಾಜಾಗುತ್ತದೆ. ಈ ಭಾಗದ ಕೃಷಿ ಪಂಸೆಟ್ ಗಳಿಗೆ ಸಮರ್ಪಕ
ವಿದ್ಯುತ್ ಪೂರೈಕೆ ಮಾಡದ ಕಾರಣ ರೈತರು ಕಂಗಲಾಗಿದ್ದಾರೆ.
ಕರೆಂಟ್ ಬಂದ 3 ಅವಧಿಯಲ್ಲಿ 10- 12 ಬಾರಿ ವಿದ್ಯುತ್ ಟ್ರಿಪ್
ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು

