ಚಳ್ಳಕೆರೆ :

ಅಕ್ರಮವಾಗಿ ಸಣ್ಣ ಚರಂಡಿ (ಮಿನಿ ಕಾಲುವೆ)ಯನ್ನು ನಖಾಶೆ ಪ್ರಕಾರ ಮಾಡಬೇಕು ಅದರ ಬದಲಾಗಿ ನಗರಸಭೆ ಇಂಜಿನಿಯರ್‌ ಗಳು ಮನಬಂದಂತೆ ರಾಜಕೀಯ ಒತ್ತಡದಿಂದ ಕಾಲುವೆ ಮಾರ್ಗವನ್ನೆ ತಿರುವುದರಿಂದ ಅಕ್ಕಪಕ್ಕದ ಮನೆಗಳಿಗೆ ತುಂಬಾ ತೊಂದರೆಯಾಗುತ್ತದೆ ಈ ಕೂಡಲೇ ಕಾಮಗಾರಿ ನಿಲ್ಲಿಸಿ ಪರೀಶಿಲನೆ ನಡೆಸಬೇಕು ಎಂದು ದಲಿತ ಮುಖಂಡ. ಮೋಹನ್ ಬಾಬು ಪೌರಾಯುಕ್ತ ಜಗರೆಡ್ಡಿ ಗೆ ಮನವಿ ಸಲ್ಲಿಸಿದ್ದಾರೆ.

ಹೌದು ನಗರದ ವಿಠ್ಠಲ ನಗರದ ಸೋಮಗುದ್ದು ರಸ್ತೆಯ ಕಸಬಾ
ಗ್ರಾಮದ ರಿ.ಸ.ನಂ: 365, 366, 367, 368 ರ ಜಮೀನುಗಳಲ್ಲಿ ಸರ್ಕಾರದ ಸರ್ವೇ ಸ್ಕೆಚ್
ಪ್ರಕಾರ ಖರಾಬು ಜಾಗದಲ್ಲಿ ಸಣ್ಣ ಚರಂಡಿಯು ನಿರ್ಮಾಣವಾಗಬೇಕಿರುತ್ತದೆ. ಆದರೆ ಇದರ
ಬದಲಾಗಿ ಖರಾಬು ಜಾಗವನ್ನು ಹೊರತುಪಡಿಸಿ ಮತ್ತು ಸರ್ಕಾರದ ಸರ್ವೇ ಸ್ಕೆಚ್ ಪ್ರಕಾರದ
ವಿರುದ್ಧವಾಗಿ ಅಕ್ರಮವಾಗಿ ಮೇಲ್ಕಂಡ ಜಮೀನುಗಳಲ್ಲಿ ಚಳ್ಳಕೆರೆ ನಗರಸಭೆಯವರು ಸಣ್ಣ ಚರಂಡಿ
ನಿರ್ಮಾಣ ಮಾಡುತ್ತಿದ್ದಾರೆ.

ಈಗಾಗಲೇ
ಜಮೀನುಗಳ ದಾಖಲಾತಿಗಳನ್ನು ಪರಿಶೀಲಿಸಿ ಮತ್ತು ಸಣ್ಣ ಚರಂಡಿ (ಮಿನಿ ಕಾಲುವೆ) ನಿರ್ಮಾಣಕ್ಕೆ
ಸರ್ವೇ ಸ್ಕೆಚ್ ಪ್ರಕಾರ ಯಾವ ಜಾಗದಲ್ಲಿ ಸಣ್ಣ ಚರಂಡಿ (ಮಿನಿ ಕಾಲುವೆ) ನಿರ್ಮಾಣ
ಮಾಡಬೇಕಾಗಿರುತ್ತದೆ. ಬದಲಾಗಿ ನೀವು ಸ್ಕೆಚ್ ವಿರುದ್ಧವಾಗಿ ಅಕ್ರಮವಾಗಿ ಸಣ್ಣ ಚರಂಡಿ (ಮಿನಿ
ಕಾಲುವೆ) ನಿರ್ಮಾಣ ಮಾಡುತ್ತಿದ್ದೀರಿ ಆದ್ದರಿಂದ ತಾವುಗಳು ಮೇಲ್ಕಂಡ ಜಮೀನುಗಳಿಗೆ
ಸೂಕ್ತವಾಗಿ ಈಗಾಗಲೇ ನಿರ್ಮಾಣವಾಗುತ್ತಿರುವ ಸಣ್ಣ ಚರಂಡಿ (ಮಿನಿ ಕಾಲುವೆ) ನಿರ್ಮಾಣವನ್ನು
ನಿಲುಗಡೆಗೊಳಿಸಬೇಕು ಎಂದು ಕಾಲುವೆ ಸ್ಥಳಕ್ಕೆ ಪೌರಾಯುಕ್ತ ಜಗರೆಡ್ಡಿ ಹಾಗೂ ಇಂಜಿನಿಯರ್ ಗಳನ್ನು ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಹಾಗೂ ಮುಂದಿನ ಜಮೀನುಗಳಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು.

About The Author

Namma Challakere Local News
error: Content is protected !!