filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 49;

ಚಳ್ಳಕೆರೆ :

ಸವರ್ಣಿಯರಿಂದ ಅನ್ಯಯಕ್ಕೆ ಒಳಗಾಗಿ ಊರು ತೊರೆದ ದಲಿತ ಕುಟುಂಬಗಳ ರಕ್ಷಣಾ ಕಾಯ್ದೆಯನ್ನು ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ ಇದರಿಂದ ದಲಿತ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಟಿಡಿ.ರಾಜಗಿರಿ ಹೇಳಿದರು.

ಅವರು ನಗರದ ತಾಲೂಕು ಕಛೇರಿಯ ಮುಂಬಾಗ ನೂರಾರು ಮಹಿಳೆಯರೊಂದಿಗೆ ಪ್ರತಿಭಟನೆ ನಡೆಸುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ದಲಿತರ ನ್ಯಾಯ ಯುತ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ತಾಲ್ಲೂಕು ಕಛೇರಿ, ಜಿಲ್ಲಾಧಿಕಾರಿ ಕಛೇರಿಗೆ ಮನವಿ ಸಲ್ಲಿಸಿದರು ನ್ಯಾಯ ಯುತ ಬೇಡಿಕೆ ಈಡೆರಿಲ್ಲ,
1989 ರ ಎಸ್.ಸಿ / ಎಸ್.ಟಿ ದೌರ್ಜನ್ಯ ನಿಷೇಧಕಾಯಿದೆನ್ವಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು
ತಾಲ್ಲೂಕು ಶಿವನಗರ (ಕುಂದಲಗುರ) ಮತ್ತು ಕಂಭತ್ತನಹಳ್ಳಿ ಚಳ್ಳಕೆರೆ ತಾಲ್ಲೂಕಿನ ಕೋನಿಗರಹಳ್ಳಿ
ಮತ್ತು ದೊಡ್ಡಬೀರೇನಹಳ್ಳಿ ಹಾಗೂ (ಚೌಳೂರು ಬಸವೇಶ್ವರ ಕಾಲೋನಿ), ಹೊಸದುರ್ಗ ತಾಲ್ಲೂಕು
ಜಂತಿಕೊಳಲು ಮತ್ತು ದೊಡ್ಡಗಟ್ಟ ಗ್ರಾಮಗಳಲ್ಲಿ ದೌರ್ಜನ್ಯ ಮತು ಸಾಮಾಜಿಕ ಬಹಿಷ್ಕಾರಕ್ಕೊಳಗಾದ
ನೊಂದ ಹಾಗೂ ಅಪಮಾನಿತ ಸಂತಸ್ತರಿಗೆ ಅವರ ಕುಟುಂಬದ ಸದಸ್ಯರಿಗೆ ಹಾಗೂ ಅವರ
ಅವಲಂಬಿತರಿಗೆ ನೇರಸಾಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಹಣವನ್ನು ಮತ್ತು
ಭೂಒಡೆತನ ಯೋಜನ್ವಯ ಮಂಜೂರಾದ ಘಟಕದ ವೆಚ್ಚವನ್ನು ಸ್ವಯಂ ಉದ್ಯೋಗ ಮತ್ತು ಉದ್ಯಮ
ಶೀಲತಾ ಅಭಿವೃದ್ಧಿಯೋಜನೆಯಡಿ ಅಳವಡಿಸುವ ಕುರಿತು ಹೆಚ್ಚುವರಿ ಅನುಧಾನವನ್ನು ಬಿಡುಗಡೆ ಗೊಳಿಸಬೇಕು.

1989 ರ ಎಸ್.ಸಿ/ ಎಸ್.ಟಿ
ದೌರ್ಜನ್ಯ ನಿಷೇಧಕಾಯಿದೆನ್ವಯ ಪ್ರಕಾರ ನೊಂದ ಹಾಗು ಅಪಮಾನಿತ ದೌರ್ಜನ್ಯ ಹಾಗೂ ಸಾಮಾಜಿಕ ಬಹಿಷ್ಕಾರಕ್ಕೊಳಾಗಾದ
ಸಂತಸ್ತರಿಗೆ ಅವರ ಕುಟುಂಬದ ಸದಸ್ಯರಿಗೆ ಹಾಗೂ ಅವರ ಅವಲಂಬಿತರಿಗೆ ನೇರ ಸಾಲ ಹಾಗೂ ಸಹಾಯಧನ ಭೂ ಒಡೆತನ
ಘಟಕವೆಚ್ಚಕ್ತಿರುವ ಅನುಧಾನವನ್ನು ಹಾಗೂ ಅದಕ್ಕಿಂತ ಹೆಚ್ಚುವರಿಯಾಗಿ 1989 ರ ಎಸ್.ಸಿ./ಎಸ್.ಟಿ ಕಾಯಿದೆ ನಿಷೇಧದ ಪ್ರಕಾರ
ಸ್ವಯಂ-ಉದ್ಯೋಗ ಮತ್ತು ಉದ್ಯಮಶೀಲತಾಯೋಜನೆಗಳಿಗೆ `ಅನ್ವಯಿಸುವಂತೆ ಸರ್ಕಾರಿ ಆದೇಶವನ್ನು ಮಾಡಬೇಕು ಎಂದು ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ ದಲಿತ ಮುಖಂಡ ಹರೀಶ್ ಓಂಕಾರ್ ಮೂರ್ತಿ, ತಿಪ್ಪೇಸ್ವಾಮಿ ,ಕೃಷ್ಣೆಗೌಡ ಹನುಮಂತ, ದುರ್ಗಮ್ಮ ಸರೋಜಮ್ಮ ದ್ಯಾಮಕ್ಕ ಮಂಗಳಮ್ಮ ತಾಯಮ್ಮ ಇನ್ನು ಹಲವಾರು ಸ್ಥಳದಲ್ಲಿ ಇದ್ದರು.

About The Author

Namma Challakere Local News
error: Content is protected !!