ಟಿ ಎನ್ ಕೋಟೆ ಗ್ರಾಮದ ಸರ್ಕಾರಿ ಗೋಮಾಳದ ಒತ್ತುವರಿ ತರುವುಗೊಳಿಸಿ ನಿವೇಶನ ರಹಿತರಿಗೆ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ಚಳ್ಳಕೆರೆ:ತಾಲೂಕಿನ ಟಿ ಎನ್ ಕೋಟೆ ಗ್ರಾಮದ ಸರ್ಕಾರಿ ಗೋಮಾಳವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ನಗರದ ಚಳ್ಳಕೆರಮ್ಮ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಹೋರಾಟಗಾರ ರಂಗಸ್ವಾಮಿ ತಾಲೂಕಿನ ಟಿ ಎನ್ ಕೋಟೆ ಗ್ರಾಮದ ಸರ್ವೆ ನಂಬರ್ 70ರಲ್ಲಿ 23.37 ಎಕರೆ 71 ರಲ್ಲಿ 54.02 ಎಕರೆ 72 ರಲ್ಲಿ 12.33 ಎಕರೆ 45ರಲ್ಲಿ 47.09 ಎಕರೆ ಒಟ್ಟು 137 ಎಕರೆ 31 ಗುಂಟೆ ಸರ್ಕಾರಿ ಗೋಮಾಳವಿದ್ದು ಇದರಲ್ಲಿ ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು ಈ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಒಟ್ಟು 137.31 ಸರ್ಕಾರಿ ಗೋಮಾಳವನ್ನು ಅದ್ದುಬಸ್ತು ಮಾಡಿಕೊಂಡು ಸರ್ಕಾರ ತನ್ನ ಆಸ್ತಿಯನ್ನು ಉಳಿಸಿಕೊಳ್ಳಬೇಕಾಗಿದೆ ಟಿ ಎನ್ ಕೋಟೆ ಗ್ರಾಮ ಪಂಚಾಯತಿ ಕೇಂದ್ರವಾಗಿದ್ದು ಸದರಿ ಗ್ರಾಮದಲ್ಲಿ 5000 ಹೆಚ್ಚು ಜನಸಂಖ್ಯೆ ವಾಸ ಮಾಡುತ್ತಿದ್ದು ನಿವೇಶನದ ಸಮಸ್ಯೆಗಳಿಂದಾಗಿ ಚಿಕ್ಕ ಮನೆಗಳಲ್ಲಿ ಎರಡು ಮೂರು ಕುಟುಂಬಗಳು ವಾಸ ಮಾಡುತ್ತಿದ್ದಾರೆ 2014ರಲ್ಲಿ ನಿವೇಶನದ ಉದ್ದೇಶಕ್ಕಾಗಿ ಸರ್ವೇ ನಂಬರ್ 71 ರಲ್ಲಿ 8 ಎಕರೆಯನ್ನು ಮಂಜೂರು ಮಾಡಿದ್ದು ಗ್ರಾಮದಲ್ಲಿ ನಿವೇಶನ ರಹಿತರು ಹೆಚ್ಚಾಗಿ ಇರುವುದರಿಂದ ಹೆಚ್ಚುವರಿಯಾಗಿ ನಿವೇಶನದ ಉದ್ದೇಶಕ್ಕಾಗಿ ಭೂಮಿ ಬೇಕಾಗಿದೆ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ಹಾಗೂ ಭೂ ರಹಿತರಿಗೆ ನ್ಯಾಯ ಒದಗಿಸಿ ಕೊಡಬೇಕು ತಹಶೀಲ್ದಾರ್ ರವರು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಗ್ರಾಮಸ್ಥರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು
ತಹಶೀಲ್ದಾರ್ ರೆಹನ್ ಪಾಷಾ ಮಾತಾಡಿ ಟಿಎಫ್ ಕೋಟೆ ಗ್ರಾಮದಲ್ಲಿ ಗೋಮಾಳ ಒತ್ತುವರಿಯ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರದ ನಿಯಮಾವಳಿಗಳ ಪ್ರಕಾರ ಇನ್ನೊಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಚಿಕ್ಕೇಗೌಡ ಮಾಲತಿ ಚಿಕ್ಕೇಗೌಡ ಬಸವರಾಜ್ ರಾಮಕೃಷ್ಣಪ್ಪ ಓಂಕಾರ ಮೂರ್ತಿ ತಿಪ್ಪೇಸ್ವಾಮಿ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

