ಚಳ್ಳಕೆರೆ : ನಗರದ ಬೆಂಗಳೂರು ರಸ್ತೆಯಲ್ಲಿರುವ ಮೀನು ಮಾರ್ಕೆಟ್ ಸಮೀಪದಲ್ಲಿ ಒಳಚರಂಡಿ ಬಾಯಿ ತೆರೆದಿದ್ದು ಪ್ರಾಣ ಅಪಾಯಕ್ಕೆ ಕುತ್ತು ತರುವಂತಿದೆ, ರಸ್ತೆ ಕಿರಿದಾಗಿದ್ದು ಇಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ಅಧಿಕಾರಿಗಳು ಅವೈಜ್ಞಾನಿಕವಾಗಿ ದೊಡ್ಡ ಚರಂಡಿಯ ಓಪನ್ ಮಾಡಿ ಪಕ್ಕದಲ್ಲಿ ಇಲ್ಲಿ ವಾಹನ ಸವಾರರು ಹಲವಾರು ಬಾರಿ ಬಿದ್ದು ಕೈಕಾಲು ಪೆಟ್ಟು ಮಾಡಿಕೊಂಡಿರುವ ನಿದರ್ಶನಗಳಿವೆ.
ಇನ್ನಾದರೂ ಅಧಿಕಾರಿಗಳು ಮೀನು ಮಾರುಕಟ್ಟೆ ಸಮೀಪದಲ್ಲಿ ಚರಂಡಿಗೆ ಸ್ಲಾಬ್ ಹಾಕಿ ಸುಗಮ ರಸ್ತೆ ಮಾಡಿಕೊಡಬೇಕೆಂದು ಮಹಿಳಾ ಗಜಪಡೆಯ ಅಧ್ಯಕ್ಷ ಜಯಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ .

