ಚಳ್ಳಕೆರೆ :
ಚಿತ್ರದುರ್ಗ ನಗರದ ರಸ್ತೆಗೆ ಪರಮಪೂಜ್ಯ ಶ್ರೀ ಮು.ನಿ.ಪ್ರ
ಮಾತೆ ಮಹಾದೇವಿಯವರ ಹೆಸರು ಇಡುವ ಕುರಿತು,
ಚಿತ್ರದುರ್ಗ ನಗರದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಸಾಸಲಹಟ್ಟಿ ಗ್ರಾಮದಲ್ಲಿ ಜನಿಸಿ ವಿಜ್ಞಾನ ತಂತ್ರಜ್ಞಾನಗಳ ಸ್ನಾತಕೋತ್ತರ
ಪದವಿಧರೆಯಾಗಿ 1966ರಲ್ಲಿ ಪೂಜ್ಯ ಸದ್ಗುರು ಲಿಂಗಾನಂದ ಸ್ವಾಮೀಜಿಯವರಿಂದ
ಜಂಗಮ ದೀಕ್ಷೆ ಪಡೆದು ಮಾತೆ ಮಹಾದೇವಿ ಎಂಬ ಅಭಿದಾನ ಹೊಂದಿ 1970ರಲ್ಲಿ
ವಿಶ್ವದ ಧಾರ್ಮಿಕ ಕ್ರಾಂತಿಗೆ ನಾಂದಿಯಾದ ಮಹಿಳಾ ಜಗದ್ಗುರು ಪೀಠವನ್ನು
ಅಲಂಕರಿಸಿದ ಇವರು ಪೂಜ್ಯ ಸ್ವಾಮೀಜಿಯವರ ಧರ್ಮಪ್ರಚಾರದ ಜೊತೆ ಕೈ
ಜೋಡಿಸಿ ಅವರ ಸಂಕಲ್ಪದ ಜ್ಯೋತಿಗೆ ಪ್ರಣತೆ ಎಣ್ಣೆ ಬತ್ತಿಯೂ ಇವರೇ ಆಗಿ
ಸಮಾಜದ ಕಲ್ಯಾಣಕ್ಕೆ ಬಸವ ತತ್ವವೇ ಮಾರ್ಗವೆಂದು ನಿರ್ಧರಿಸಿ ನಿರಂತರ ತತ್ವ
ಪ್ರಚಾರದಲ್ಲಿ ತೊಡಗಿಸಿದ್ದು ಅಲ್ಲದೇ 1980ರಲ್ಲಿ ರಾಷ್ಟ್ರೀಯ ಬಸವದಳವೆಂಬ ಧಾರ್ಮಿಕ
ಸಂಘಟನೆಯನ್ನು ಕಟ್ಟಿ ಸಾವಿರಾರು ಸಂಖ್ಯೆಯಲ್ಲಿ ಬೆಳೆಸಿದ್ದಾರೆ.

ಅಲ್ಲದೇ ತರಂಗಿಣಿ
ಹೆಪ್ಪಿಟ್ಟು ಹಾಲು ವಿಶ್ವಧರ್ಮ ಪ್ರವಚನ ಚುಳುಕಾದ ಚೇತನ, ಬಸವಧರ್ಮ
ಸಂಸ್ಕಾರಗಳು ಇಂತರ ನೂರಾರು ಗ್ರಂಥಗಳನ್ನು ರಚಿಸಿ ವಿಶ್ವ ಕಲ್ಯಾಣ
ಗ್ರಂಥಮಾಲೆಯನ್ನು ಪ್ರಕಟಿಸಿದ್ದು ಅಲ್ಲದೇ ಸರ್ವಜ್ಞನ ಅಮೃತವಾಣಿಯಂತೆ 1988ರಲ್ಲಿ
ಬಸವಧರ್ಮ ಪೀಠವನ್ನು ಸ್ಥಾಪಿಸಿ ಪೂಜ್ಯ ಲಿಂಗಾನಂದ ಶ್ರೀಗಳನ್ನು ಮಹಾಜಗದ್ಗುರು
ಪೀಠದ ಪ್ರಥಮ ಜಗದ್ಗುರುಗಳನ್ನಾಗಿ ಗುರುತಿಸಿದರು.

ದಿನಾಂಕ:14-03-2019 ರಂದು
ಋನ್ವಯ ಕಾಯವನ್ನು ಕಳಚಿದ ದಿನದಿಂದ 6ನೇ ಲಿಂಗೈಕ್ಯ ಸಂಸ್ಕರಣೆ ಮತ್ತು 79ನೇ
ಜನ್ಮದಿನದ ಸಂಕೇತವಾಗಿ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿದೆ.
ಇವರನ್ನು ಚಿತ್ರದುರ್ಗ ನಗರದಲ್ಲಿ ಗುರುತಿಸಲು ಚಿತ್ರದುರ್ಗ ನಗರದ ಜಿಲ್ಲಾ
ನ್ಯಾಯಾಲಯದ ಎಡಭಾಗದ ರಸ್ತೆಯಲ್ಲಿ ವೃತ್ತ ಅಥವಾ ಮಹೇಂದ್ರ ಹೀರೋ ಶೋ
ರೂಂ ಪಕ್ಕದಲ್ಲಿನ ವೃತ್ತಕ್ಕೆ ಪರಮಪೂಜ್ಯ ಶ್ರೀ ಮ.ನಿ.ಡಾ.ಮಾತೆ ಮಹಾದೇವಿಯವರ
ಹೆಸರು ಇಡಲು ನಿಯಮಾನುಸಾರ ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.

About The Author

Namma Challakere Local News
error: Content is protected !!