ಚಳ್ಳಕೆರೆ :
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ತಾಲ್ಲೂಕು ಪಂಚಾಯತ್ ಆವರಣದಲ್ಲಿ ನಡೆದ ವಿಶೇಷ ಚೇತನರಿಗೆ ಸ್ಕೂಟಿ ಇತರೆ ಸೌಲಭ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಚಳ್ಳಕೆರೆ ನಗರದ ತಾಲ್ಲೂಕು ಪಂಚಾಯತ್ ಆವರಣದಲ್ಲಿ ನಡೆದ ವಿಕಲಚೇತನರು ಮತ್ತು ಹಿರಿಯರ ನಾಗರಿಕ ಸಬಲೀಕರಣ ಇಲಾಖೆ ಚಿತ್ರದುರ್ಗ 2024 -25 ನೇ ಸಾಲಿನ ಗ್ರಾಮೀಣ ವಿಕಲಚೇತನರ ಪುನರ್ವಸತಿ ಯೋಜನೆ, ಇಲಾಖೆಯ ವಿವಿಧ ಸೌಲಭ್ಯಗಳ ಫಲಾನುಭವಿಗಳಿಗೆ ಸ್ಕೂಟಿ ಇತರೆ ಸೌಲಭ್ಯಗಳನ್ನು ವಿತರಣೆ ಮಾಡಿದರು .
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗಳಾದ ಜೆ ವೈಶಾಲಿ, ತಾಲೂಕು ಕಾರ್ಯ ನಿರ್ವಹಕ ಅಧಿಕಾರಿಗಳಾದ ಶಶಿಧರ್, ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಜಿ ನರಸಿಂಹಮೂರ್ತಿ, ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು, ನಗರ ಪುನರ್ವಸತಿ ಕಾರ್ಯಕರ್ತರು, ನಗರಸಭೆ ಪ್ರಭಾರ ಅಧ್ಯಕ್ಷರಾದ ಕವಿತಾ ಬೋರಯ್ಯ, ನಗರಸಭೆ ಸದಸ್ಯರಾದ ಸುಜಾತ ಪ್ರಹ್ಲಾದ್, ಸುಮಾ ಭರಮಯ್ಯ, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

