ಚಳ್ಳಕೆರೆ :
ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ರವರ ನಿರ್ದೆಶನದಂತೆ, ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ, ಹಿರಿಯೂರು ಹಾಗೂ ಅಬಕಾರಿ ನಿರೀಕ್ಷಕರು ಚಳ್ಳಕೆರೆ ಇವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕರು-2 ಚಳ್ಳಕೆರೆ ವಲಯದ
ಚಳ್ಳಕೆರೆ ತಾಲ್ಲೂಕಿನ ಆಂದ್ರ ಗಡಿಭಾಗದಲ್ಲಿರುವ ಆಂದ್ರದ ತಾಳಿಕೆರೆ(ಕೆ.ಪಿ.ಕುಂಟೆ) ಗ್ರಾಮದಿಂದ ಮಲ್ಲಸಮುದ್ರ ಗ್ರಾಮಕ್ಕೆ ಬರುವ ರಸ್ತೆಯಲ್ಲಿ ಅಂಜಿನಪ್ಪ ತಾಳಿಕೆರೆ ಗ್ರಾಮ, ಗುಮ್ಮಘಟ್ಟ ಮಂಡಲ ರಾಯದುರ್ಗ ತಾಲ್ಲೂಕು, ಅನಂತಪುರ ಜಿಲ್ಲೆ, ಆಂದ್ರ ಪ್ರದೇಶ ರಾಜ್ಯ ಈ.ಮಲ್ಲಪ್ಪ
, ತಾಳಿಕೆರೆ ಗ್ರಾಮ, ಗುಮ್ಮಘಟ್ಟ ಮಂಡಲ ರಾಯದುರ್ಗ ತಾಲ್ಲೂಕು, ಅನಂತಪುರ ಜಿಲ್ಲೆ, ಆಂದ್ರ ಪ್ರದೇಶ ರಾಜ್ಯ ಎಂಬ ಆರೋಪಿಗಳು ಹಾಗೂ ದ್ವಿಚಕ್ರ ವಾಹನವನ್ನು ಮತ್ತು 09 ಲೀಟರ್ ಸೇಂದಿಯನ್ನು ಸ್ಥಳ ಮಹಜರ್ ಕ್ರಮ ಜರುಗಿಸಿ ಇಲಾಖಾ ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ ಘೋರ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
ಆರೋಪಿಗಳನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಕಲಂ 35 (3) ರ ರೀತ್ಯಾ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಮುದ್ದೆಮಾಲಿನ ಮೌಲ್ಯ -50500 ರೂಪಾಯಿಗಳು ಆಗಿರುತ್ತದೆ ಎನ್ನಲಾಗಿದೆ.

