ಚಳ್ಳಕೆರೆ: ಇಂದಿನ ಜೀವನದ ಜಂಜಾಟದಲ್ಲಿ ತಾವಾಯಿತು ತಮ್ಮ
ಕೆಲಸವಾಯಿತು ಎಂಬ ಜನರ ನಡುವೆ ಸುದರ್ಶನ್ ಎಂಬ ಯುವಕ
ಅರಣ್ಯ ಉಳಿಸಿ ಎಂಬ ಧೈಯದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ
ಚಿಂತಾಮಣಿಯಿಂದ ಕೇದಾರನಾಥದವರೆಗೆ ಸೈಕಲ್ ಯಾತ್ರೆ ಕೈಗೊಂಡು
ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಚಳ್ಳಕೆರೆ ನಗರಕ್ಕೆ ಆಗಮಿಸಿದ್ದ ಇವರನ್ನು
ನಗರದ ಯುವ ಜನತೆ ಬರಮಾಡಿಕೊಂಡು ಅವರ ಕಾರ್ಯಕ್ಕೆ ಮೆಚ್ಚುಗೆ
ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿ ಬುಕ್ ಡಿಪೋದ ಮಾಲೀಕ
ಕೀರ್ತಿಪ್ರಸಾದ್ ಮನುಷ್ಯ ತನ್ನ ಸ್ವಾರ್ಥದ ಬದುಕಿಗಾಗಿ ಅರಣ್ಯವನ್ನು
ನಾಶ ಮಾಡುತ್ತಿರುವುದರಿಂದ ಕಾಡುಪ್ರಾಣಿಗಳು ನಾಡಿನತ್ತ ಮುಖ
ಮಾಡಿ ಗ್ರಾಮೀಣ ಭಾಗಗಳಲ್ಲಿ ಜನರಿಗೆ ತೊಂದರೆ ಉಂಟು ಮಾಡುತ್ತಿವೆ
ಅರಣ್ಯವನ್ನು ಉಳಿಸಿದಾಗ ಮಾತ್ರ ಉತ್ತಮ ಮಳೆ ಬೆಳೆ ಹಾಗೂ ಕಾಡು
ಪ್ರಾಣಿಗಳ ಜೀವಸಂಕುಲವನ್ನು ಉಳಿಸಲು ಸಹಾಯವಾಗುತ್ತದೆ. ಮೋಜು
ಮಸ್ತಿ ಮಾಡುತ್ತಾ ತಿರುಗಾಡುವ ಯುವ ಜನತೆಗೆ ಸುದರ್ಶನ್ ಮಾದರಿಯಾಗಿ
ನಿಂತಿದ್ದಾರೆ ಇಂತಹವರಿಗೆ ಬೆಂಬಲ ಸೂಚಿಸುವುದು ನಮ್ಮೆಲ್ಲರ ಕರ್ತವ್ಯ
ಎಂದು ತಿಳಿಸಿದರು.
ಯಾತ್ರಿಕ ಸುದರ್ಶನ್ ಮಾತನಾಡಿ ಚಿಂತಾಮಣಿ ತಾಲೂಕಿನಿಂದ
ಕೇದಾರನಾಥದವರೆಗೆ ಸುಮಾರು 70 ದಿನಗಳ ಕಾಲ ಇದೇ ತಿಂಗಳ 10ರಿಂದ
4000 ಕಿಲೋಮೀಟರ್ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದು ಅಂಜನಾದ್ರಿ
ಶಿರಡಿ ಉಜ್ಜಯಿನಿ ಬದ್ರಿನಾಥ ಗಂಗೋತ್ರಿ ಯಮುನಾ ಕೇದಾರನಾಥದವರೆಗೆ
ಸಾಗಲಿದ್ದು ಅರಣ್ಯವನ್ನು ಉಳಿಸುವ ಉದ್ದೇಶದಿಂದ ಈ ಯಾತ್ರೆಯನ್ನು
ಕೈಗೊಂಡಿದ್ದೇನೆ ಮನುಷ್ಯ ತಾನು ಬದುಕುವುದರ ಜೊತೆಗೆ ಅರಣ್ಯ ಹಾಗೂ
ಪರಿಸರವನ್ನು ಸಂರಕ್ಷಿಸಿದರೆ ಮುಂದಿನ ಪೀಳಿಗೆಗೆ ವರದಾನವಾಗಲಿದೆ ಎಂದು
ತಿಳಿಸಿದರು.ಈ ಸಂದರ್ಭದಲ್ಲಿ ಕೀರ್ತಿ ಪ್ರಸಾದ್ ಮಂಜು, ಶ್ರೀನಿವಾಸ್
ಶಿವಕುಮಾರ್ ತಿಪ್ಪೇಸ್ವಾಮಿ ಚನ್ನಬಸವಣ್ಣ ಶುಭ ಕೋರಿದರು.

About The Author

Namma Challakere Local News
error: Content is protected !!