“ಸ್ವಾಮಿ ವಿವೇಕಾನಂದರ ಬಾಲ್ಯದ ನೆನಪುಗಳು ಸ್ವಾರಸ್ಯಕರ”-ಋತಿಕ್ ಕುಮಾರ್ ಅಭಿಪ್ರಾಯ. ಚಳ್ಳಕೆರೆ-ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದ ಘಟನೆಗಳು ಅತ್ಯಂತ ಸ್ವಾರಸ್ಯಕರವಾಗಿದ್ದು ಅವುಗಳ ಸ್ಮರಣೆ ಅಗತ್ಯವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಋತಿಕ್ ಕುಮಾರ್ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ”ದಲ್ಲಿ ಪಾಲ್ಗೊಂಡು ಅವರು “ವೀರ ನರೇಂದ್ರ”ಎಂಬ ಪುಸ್ತಕದ ಕುರಿತಾಗಿ ಉಪನ್ಯಾಸ ನೀಡಿದರು.ಈ ಶಿಬಿರದ ಪ್ರಯುಕ್ತ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಮುತ್ತುಗಳ ಪಠಣ ಹಾಗೂ ವಿವಿಧ ಮನೋರಂಜನಾ ಆಟಗಳನ್ನು ಆಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂತೋಷಕುಮಾರ್, ಡಾ.ಭೂಮಿಕ, ಪುಷ್ಪಲತಾ,ಪ್ರಿಯಾಂಕ, ಸಂಗೀತ ವಸಂತಕುಮಾರ್, ಹರ್ಷಿತಾ, ಪ್ರತೀಕ್ಷಾ,ವಿನತಿ, ಶ್ರೇಯಸ್ಸು, ಮನಸಿರಿ, ಧ್ರುವ ನಾರಾಯಣ, ನಿಖಿಲೇಶ್ ಯಾದವ್,ಮನ್ವಿತ್, ವಿವಿಕ್ತ, ವೈಷ್ಣವಿ, ಪ್ರಣಾಮ್ಯ, ಕೋಮಲಸಿರಿ,ದವನ್, ಸಮರ್ಥ, ಕಾರ್ತಿಕ್,ಮೋಕ್ಷಿತ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

About The Author

Namma Challakere Local News
error: Content is protected !!