ಚಳ್ಳಕೆರೆ :
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ
ನಗರದ ಸರಕಾರಿ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಆಯುರ್ವೇದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಆಸ್ಪತ್ರೆಯ ಆವರಣದಲ್ಲಿ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಇನ್ನು ವಿಶ್ವಪರಿಸರ ದಿನಾಚರಣೆ ಅಂಗವಾಗಿ ಬೇವಿನಸಸಿ ನೆಟ್ಟು ಮಾತನಾಡಿದ ಡಾ ಉದಯ ಭಾಸ್ಕರ್ , ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ, ಸ್ವಚ್ಛ ಗಾಳಿ ಆರೋಗ್ಯಕ್ಕೆ ಜೀವಾಳ ವಿದ್ದಂತೆ ಆದ್ದರಿಂದ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ನಾವು ಬೆಳೆಸಿ ಪೋಷಿಸುವುದರ ಮೂಲಕ ಮಾದರಿಯಾಗಬೇಕು, ಗಿಡಮರಗಳನ್ನು ಅತಿ ಹೆಚ್ಚಾಗಿ ಮಕ್ಕಳಂತೆ ಪೋಷಿಸಬೇಕು ಎಂದರು .
ಇದೇ ಸಂಧರ್ಭದಲ್ಲಿ
ಎಂ ಸಿ, ಹಿರಿಯ ವೈದ್ಯಾಧಿಕಾರಿಗಳು
ಡಾ ನಂದಿನಿ, ಲಾವಣ್ಯ, ಎಫ್ ವಿ, ತಜ್ಞ ವೈದ್ಯರು
ಡಾ ವೇದಪ್ರಿಯಾ ವಿ, ತಜ್ಞ ವೈದ್ಯರು ಇತರರು ಇದ್ದರು.

