ಚಳ್ಳಕೆರೆ :

ಇಂದಿನ ಯುವಕರಿಗೆ ಸಮಾಜ ಸೇವೆಯ ಉತ್ಕಟವಾದ ತುಡಿತವಿರಬೇಕೆಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಹೇಳಿದರು

ಅವರು ತಾಲೂಕಿನ ನಾಯಕನಹಟ್ಟಿ ಪಟ್ಟಣದ ಎಚ್ಎಂಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಪದವಿ ತರಗತಿಗಳು ಕೊನೆಯದಾಗ ಯುವಕರಿಗೆ ಬದುಕಿನ ವಸಂತ ಕಾಲದ ದಾರಿ ಕಾಣುತ್ತದೆ ತಮ್ಮ ವೃತ್ತಿಪರತೆಯ ಆಯ್ಕೆಯ ಕಾಲ ಇದಾಗಿರುತ್ತದೆ ಈ ಆಯ್ಕೆಯಲ್ಲಿ ಬರುವಂತಹ ವೈಫಲ್ಯಗಳನ್ನು ಯುವಕರು ಮೆಟ್ಟಿ ನಿಲ್ಲಬೇಕು ಈ ವೈಫಲ್ಯಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು ಬದುಕಿನ ಮುಂದಿನ ವೃತ್ತಿ ಯಾವುದೇ ಇರಲಿ ಅದರಲ್ಲಿ ಸಮಾಜ ಸೇವೆ ನಿತ್ಯದ ಅವಿಭಾಜ್ಯ ಅಂಗವಾಗಿರಬೇಕು ನೋಂದವರು ಮತ್ತು ಅಸಹಾಯಕರ ಬದುಕಿನಲ್ಲಿ ಭರವಸೆ ಬೆಳಕನ್ನು ತೋರುವ ದೀಪ ನೀ ವಾಗಬೇಕು ಪದವಿ ನಂತರದಲ್ಲಿ ವೃತ್ತಿ ಜೀವನದ ಬಹು ಆಯ್ಕೆ ನಿಮ್ಮಗಳಿಗೆ ಮುಕ್ತವಾಗಿರುತ್ತದೆ.

ವಿವಿಧ ಶ್ರೇಣಿಯ ಸ್ಪರ್ಧಾತ್ಮಕ ಪರೀಕ್ಷೆಗಳಿರುತ್ತವೆ ಇವುಗಳಲ್ಲಿ ಪರಿಶ್ರಮದ ಮುಖಾಂತರ ಯಶಸ್ಸು ಕಂಡು ಈ ದೇಶದ ದಾರ್ಶನಿಕರು ಹುತಾತ್ಮರು ಮತ್ತು ಸಮಾಜ ಸೇವಕರ ಹೆಜ್ಜೆ ಗುರುತು ನಿಮ್ಮಗಳ ವೃತ್ತಿ ಜೀವನದ ಆದರ್ಶವಾಗಿ ಇರಬೇಕೆಂದು ಹಾರೈಸಿದರು.

ಎಚ್ಎಂಟಿ ಶಾಲೆಯ ಕಾರ್ಯದರ್ಶಿಗಳಾದ ಎಂ ಓ ಟಿ ಸ್ವಾಮಿ ಮಾತನಾಡಿ ಈ ವಿದ್ಯಾ ಸಂಸ್ಥೆಯು ಅತ್ಯಂತ ಕಡಿಮೆ ದರದ ಶುಲ್ಕದಲ್ಲಿ ಎಲ್ಲಾ ರೀತಿಯ ವಿದ್ಯೆಯನ್ನು ನೀಡುತ್ತದೆ ಅದೆಷ್ಟೋ ಜನ ವಿದ್ಯಾ ಸಂಸ್ಥೆಯಲ್ಲಿ ವಿದ್ಯೆಯನ್ನು ಪಡೆದಂತವರು ತಮ್ಮ ಬದುಕಿನ ದಾರಿಯನ್ನು ಕಂಡುಕೊಂಡಿದ್ದಾರೆ ವಿವಿಧ ಶ್ರೇಣಿಯ ಹುದ್ದೆಯಲ್ಲಿದ್ದಾರೆ ಅದರಂತೆ ಅಂತಿಮ ವರ್ಷದ ಪದವಿಯ ವಿದ್ಯಾರ್ಥಿಗಳು ಮುಂದಿನ ತಮ್ಮ ಬದುಕಿನಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಿ ಮತ್ತು ಈ ವಿದ್ಯಾಸಂಸ್ಥೆಯ ಬಗ್ಗೆ ಅಭಿಮಾನ ಹೊಂದಿದಲ್ಲಿ ಶ್ರಮದ ಮತ್ತು ಪ್ರಯತ್ನದ ಯಶಸ್ಸು ನಿಮ್ಮಗಳ ಅದಾಗುತ್ತದೆ ಎಂದು ಆಶಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷರಾದಂತಹ ಚನ್ನಗಾನಹಳ್ಳಿ ಮಲ್ಲೇಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಪದವಿ ಜೀವನದ ಆಯ್ಕೆಯ ಘಟ್ಟವಾಗಿರುತ್ತದೆ ಈ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಉನ್ನತ ಪ್ರಜೆಗಳಾಗಿ ತಮ್ಮ ಮುಂದಿನ ವೃತ್ತಿಜೀವನದ ಜೊತೆ ಸಮಾಜ ಸೇವಾ ಕಾರ್ಯ ನಿತ್ಯವೂ ಕೈಗೊಳ್ಳುವಂತಾಗಲಿ ಎಂದು ಹೇಳಿದರು.


ಸಮಾರಂಭದಲ್ಲಿ ಎಚ್ ಎಮ್ ಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್, ಎಚ್ಎಂಟಿ ಪಿಯು ಕಾಲೇಜಿನ ಮಂಜುನಾಥ್ , ಎಚ್ ಎಮ್ ಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ್, ಪ್ರಾಂಶುಪಾಲರಾದ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ರಾಜೇಂದ್ರ ,
ನಾಯಕನಹಟ್ಟಿ ಬಿಜೆಪಿ ಮಂಡಲದ ಕಾರ್ಯದರ್ಶಿ ಗೋವಿಂದಪ್ಪ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!