filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.92325383, 0.28790197);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ಚಳ್ಳಕೆರೆ :

ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ ,
ಕರ್ನಾಟಕ ದಲಿತ ಸಂಘರ್ಷ ಸಮಿತಿ ,
ಜಿಲ್ಲಾ ಮತ್ತು ತಾಲ್ಲೂಕು ಸಮಿತಿಯಿಂದ
ವಿವಿಧ ಬೇಡಿಕೆಗಳ ಹಕ್ಕೊತ್ತಾಯಿಸಿ ಪ್ರತಿಭಟನೆ ನಡೆಸಿದರು.

ಚಳ್ಳಕೆರೆ
ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ವಿವಿಧ ಹಕ್ಕೋತ್ತಯಗಳನ್ನು ಈಡೇರಿಸುವವರೆಗೂ ನಾವು ಪ್ರತಿಭಟನೆಯನ್ನು ಕೈಬಿಡುವುದಿಲ್ಲ ನಮಗೆ ನ್ಯಾಯ ಸಮ್ಮತವಾದ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದೇ ಸಂಧರ್ಭದಲ್ಲಿ ರಾಜ್ಯ ಸಂಚಾಲಕ ಭೀಮನಕೆರೆ ಶಿವಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಹಲವಾರು ಸಮಸ್ಯೆಗಳು ತಾಂಡವಾಡುತ್ತಿವೆ, ಆಳುವವರ ಕೈಯಲ್ಲಿ ಬಡ ಜನರು, ದಲಿತರು ಕೈಗೊಂಬೆಯಾಗಿದ್ದಾರೆ, ಇದರಿಂದ ನಮಗೆ ಸೂಕ್ತ ರಕ್ಷಣೆ, ಹಾಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು ‌

ಇನ್ನೂ ಜಿಲ್ಲಾ ಸಂಚಾಲಕ ಎನ್.ಪ್ರಕಾಶ್ ಮಾತನಾಡಿ, ಯಲಗಟ್ಟೆ ಗ್ರಾಮದ ದಲಿತರು ನಿವೇಶನಕ್ಕಾಗಿ ಕ್ರಯ ಪಡೆದ ಯಲಗಟ್ಟೆ ಗ್ರಾಮಿ ರಿ.ಸ.ನಂ. 24 ರ ಭೂಮಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ
ಅಳತೆ ಮಾಡಿಸಿ ಸ್ವಾಧೀನ ಕೊಡಿಸಿ ವಸತಿ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸುತ್ತೇವೆ.

ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ರಾಮದುರ್ಗ ಗ್ರಾಮದ ದುರುಗಮ್ಮ ಎಂಬುವವರ 45 ಗ್ರಾಂ ಚಿನ್ನ
ಕಳುವಾಗಿದ್ದು ವಿಳಂಬ ಮಾಡದೇ ಪತ್ತೆ ಹಚ್ಚಲು ಒತ್ತಾಯಿಸುತ್ತೇವೆ.

ಗೊಲ್ಲಕಟ್ಟೆ ಗ್ರಾಮದ ಜಯಲಕ್ಷ್ಮಿಕೋಂ ಕೆಂಗ ತಿಪ್ಪೇಸ್ವಾಮಿ ಇವರ ನಿವೇಶನಕ್ಕೆ ಓಡಾಡುವ ಒತ್ತುವರಿ ಮಾಡಿದ ದಾರಿಗೆ ತೆರವುಗೊಳಿಸಿ ಓಡಾಡಲು
ಅವಕಾಶ ಮಾಡಿಕೊಡಬೇಕು.

ಚಿಕ್ಕಮ್ಮನಹಳ್ಳಿ ಸ.ನಂ. 13 ರ 3 ಎಕರೆ ಸ್ಮಶಾನವನ್ನು ಒತ್ತುವರಿ ತೆರವುಗೊಳಿಸಬೇಕು. ಮತ್ತು ವರವು ಸ.ನಂ. 34 ರ ದರ್ಕಾಸ್ತು ಭೂಮಿಗೆ ಓಡಾಡಲು
ದಾರಿ ಕಲ್ಪಿಸಿಕೊಡಬೇಕು, ಎಂದು ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ ನೂರಾರು ಪ್ರತಿಭಟನೆ ಕಾರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!