ಚಳ್ಳಕೆರೆ :

ರೈತರ ಬೆಳೆಗಳಿಗೆ ಅಳವಡಿಸಿದ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿ ಕಳೆದ 20 ದಿನಗಳಾದರೂ ಬೆಸ್ಕಾಂ ಇಲಾಖೆ ಟ್ರಾನ್ಸ್ ಫಾರ್ಮ್ ಪೆಟ್ಟಿಗೆಯನ್ನು ನೀಡದೆ ನಿರ್ಲಕ್ಷ ವಹಿಸಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಬೆಳೆ ಒಣಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಳ್ಳಕೆರೆ ತಾಲೂಕಿನ ತಳಕು ಹೋಬಳಿ ಬೆಸ್ಕಾಂ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿ ಸೇನೆ ಪದಾಧಿಕಾರಿಗಳು ಹಾಗೂ
ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಬೆಸ್ಕಾಂ ಸಹಾಯಕ ನಿರ್ದೇಶಕರಾದ ಮಮತಾ ರವರಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಕಣ್ಣ ಮುಚ್ಚಲೆಯಿಂದ ರೈತರು ಈಗಾಗಲೇ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಪರಿತಪಿಸುತ್ತಿದ್ದಾರೆ, ಆದರೆ 20 ದಿನಗಳ ಕಳೆದರೂ ಕೂಡ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಾ ರೈತರನ್ನು ನಿರ್ಲಕ್ಷ ವಹಿಸುತ್ತಿರುವ ಬೆಸ್ಕಾಂ ಇಲಾಖೆ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಇನ್ನು ಹಿರೆಹಳ್ಳಿ ಬೆಸ್ಕಾಂ ಅಧಿಕಾರಿಗಳು ಸ್ಥಳದಲ್ಲಿ ಇರದೆ ರೈತರಿಗೆ ಸಮಸ್ಯೆಗಳನ್ನು ಆಲಿಸದೆ ನಿರ್ಲಕ್ಷ ವಹಿಸುತ್ತಾ ಉಡಾಫೆಯಿಂದ ಉತ್ತರಿಸುತ್ತಾರೆ, ರೈತರಿಗೆ ವಿದ್ಯುತ್ ಪರಿವರ್ತಕ ರಿಪೇರಿ ಮಾಡಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ, ಇನ್ನೂ ಸ್ಥಳದಲ್ಲಿ ಎಸ್ ಓ ಇರದೆ ಬೇಜಾವ್ದಾರಿ ತೋರುತ್ತಾರೆ ಇದರಿಂದ ರೈತರಿಗೆ ಸಮಸ್ಯೆ ಕಾಡುತ್ತಿದೆ ಎಂದರು ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಡಿ.ಚಂದ್ರಶೇಖರ್ ನಾಯ್ಕ್, ಗಂಗಾಧರ, ರಂಗಾರೆಡ್ಡಿ, ತಿಪ್ಪೇಸ್ವಾಮಿ, ಮುದಿಯಪ್ಪ, ಅಶೋಕ ರೆಡ್ಡಿ,ನರಸಿಂಹ ರೆಡ್ಡಿ.
ಇತರರು ರೈತರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!