ಚಳ್ಳಕೆರೆ :
ಕಲಬುರ್ಗಿಯಲ್ಲಿ ಪ್ರಧಾನಿ ಮೋದಿಯನ್ನು ಶ್ಲಾಘಿಸಿದ
ಸಚಿವ ಪ್ರಿಯಾಂಕ್ ಖರ್ಗೆ (ವಿಡಿಯೋ)
ಪ್ರಧಾನಿ ಮೋದಿ ಮಂಗಳವಾರ ಪಂಜಾಬ್ ನ ಅದಂಪುರಕ್ಕೆ
ಭೇಟಿ ನೀಡಿ ಸೈನಿಕರಿಗೆ ಧೈರ್ಯ ತುಂಬಿರುವ ವಿಚಾರವಾಗಿ
ಕಲಬುರಗಿಯಲ್ಲಿ ಇಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
ನೀಡಿದ್ದಾರೆ. ನಮ್ಮ ಸೈನಿಕರ ಕಾರ್ಯವೈಖರಿಯನ್ನು ರಾಷ್ಟ್ರ
ಮೆಚ್ಚುತ್ತಿದೆ. ನಿನ್ನೆ ಪ್ರಧಾನಿ ಸೈನಿಕರಿಗೆ ಧೈರ್ಯ ತುಂಬಿರುವುದು
ಶ್ಲಾಘನೀಯ ಕಾರ್ಯವಾಗಿದೆ ಎಂದರು. ಇಂದು ಕಲಬುರ್ಗಿಯಲ್ಲಿ
ಮಾಧ್ಯಮದವರ ಜೊತೆ ಮಾತನಾಡಿದ ಅವರು ಪ್ರಧಾನಿ
ಮೋದಿಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

