ಚಳ್ಳಕೆರೆ :
ಹೊಳಲ್ಕೆರೆ: ತಾಳಿಕಟ್ಟೆ ಗ್ರಾಪಂ ಗೋಲ್ಮಾಲ್ ತನಿಖೆ
ನಡೆಸಿ
ಹೊಳಲ್ಕೆರೆ ತಾಳಿಕಟ್ಟೆ ಗ್ರಾಪಂನಲ್ಲಿ ಭಾರಿ ಗೋಲ್ಮಾಲ್ ನಡೆದಿದ್ದು,
ಇದರ ತನಿಖೆ ನಡೆಸಬೇಕೆಂದು ಗ್ರಾ ಪಂ ಸದಸ್ಯರು ಹಾಗೂ ರೈತ
ಸಂಘ ಆಗ್ರಹಿಸಿ ಇಂದು ಚಿತ್ರದುರ್ಗ ಜಿಪಂ ಮುಂದೆ ಪ್ರತಿಭಟನೆ
ನಡೆಸಿದರು. 8ತಿಂಗಳಿಂದ ಗ್ರಾಪಂನಲ್ಲಿ ಸಭೆ ನಡೆಸಿಲ್ಲ. ವಿಡಿಯೋ
ನರಸಿಂಹಪ್ಪ ಹಾಗೂ ಅಧ್ಯಕ್ಷರು ಸೇರಿ 15ನೇ ಯೋಜನೆ ಹಣವನ್ನು
ಲೂಟಿ ಹೊಡೆದಿದ್ದಾರೆ. ವರ್ಗ ೧ ಗ್ರಾಪಂ ಸದಸ್ಯರ ವೇತನ ಕೂಡ
ನುಂಗಿದ್ದಾರೆ. ಜಿಲ್ಲಾ ಪಂಚಾಯತಿ ಸಿಇಒ ಸೋಮಶೇಖರ್ ತನಿಖೆ
ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

