ವಿದ್ಯಾರ್ಥಿಗಳು ಕಾಲೇಜಿಗೆ ಮತ್ತು ಹೆತ್ತವರಿಗೆ ಕೀರ್ತಿ ತರುವ ಹಾಗೆ ಉತ್ತಮ ಶಿಕ್ಷಣ ಪಡೆಯಬೇಕು ಮಾಜಿ ಶಾಸಕ ನೇರಲಗುಂಟೆ ಎಸ್. ತಿಪ್ಪೇಸ್ವಾಮಿ ವಿದ್ಯಾರ್ಥಿಗಳಿಗೆ ಸಲಹೆ.

ನಾಯಕನಹಟ್ಟಿ ::
ಗುರಿ ಇದ್ದಾಗ ಉನ್ನತ ಸ್ಥಾನಕ್ಕೇರಲು ಸಾಧ್ಯ
ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಓದಬೇಕು. ಆಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಮಾಜಿ ಶಾಸಕ ನೇರಲಗುಂಟೆ ಎಸ್ ತಿಪ್ಪೇಸ್ವಾಮಿ ಹೇಳಿದರು.

ಬುಧವಾರ ರಾತ್ರಿ ಹೋಬಳಿ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೋಗಿಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ 2024- 25 ಹೆಚ್‌. ಎಂ.ಟಿ. ಪ್ರಥಮ ದರ್ಜೆ ಕಾಲೇಜು ನಾಯಕನಹಟ್ಟಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶೇಷ ವಾರ್ಷಿಕ ಶಿಬಿರಕ್ಕೆ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪತ್ಯೇತರ ಚಟುವಟಿಕೆಗಳಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಂಡು ವಿಷಯಗಳಲ್ಲಿ ಆಳವಾದ ಜ್ಞಾನವನ್ನು ಸಂಪಾದಿಸಿಕೊಂಡು, ಪರಿಪಕ್ವತೆ ಪಡೆದು ನಿಜ ಜೀವನದಲ್ಲೂ ಕೂಡ ಕಲಿತ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಇಂದು ರಾಜ್ಯದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ ಆದರೆ ವಿದ್ಯಾರ್ಥಿಗಳು ಸಹ ಹೆತ್ತವರು ಕಷ್ಟಪಟ್ಟು ನಿಮಗೆ ಶಿಕ್ಷಣವನ್ನ ಕೊಡಿಸುತ್ತಾರೆ ಅವರಿಗೆ ಮತ್ತು ಕಾಲೇಜಿಗೆ ಕೀರ್ತಿ ತರುವ ಹಾಗೆ ಶಿಕ್ಷಣವನ್ನ ಪಡೆದು ಉನ್ನತ ಸ್ಥಾನವನ್ನು ಪಡೆದುಕೊಳ್ಳಬೇಕು ಎಂದರು.

ಇದೇ ವೇಳೆ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಶ್ರೀಮತಿ ಸುಧಾ ರಂಗಸ್ವಾಮಿ, ಎಚ್ಐವಿ ಏಡ್ಸ್ ಹಾಗೂ ರಕ್ತದಾನ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತಿ ಸದಸ್ಯ ಎಸ್‌. ಓ. ತಿಪ್ಪೇಸ್ವಾಮಿ, ಎಸ್ ಟಿ ಎಸ್ ಆರ್ ಗ್ರಾಮೀಣ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂ ವೈ ಟಿ ಸ್ವಾಮಿ, ಜೋಗಿ ಹಟ್ಟಿ ಮುಖಂಡರಾದ ಬಿ.ಮರಳಪ್ಪ, ,ಸಂಗೀತ ನಿರ್ದೇಶಕ ಎಸ್. ಬಿ. ಗೋವಿಂದಪ್ಪ, ಬಿ‌.ಯರ್ರಿಸ್ವಾಮಿ, ಎ.ಜಿ. ಮಂಜುನಾಥ್,ಪಾಂಡು, ಕರಡಪ್ಪ, ಗಾಂಧಿ ತಿಪ್ಪೇಸ್ವಾಮಿ, ಸೇರಿದಂತೆ ಸಮಸ್ತ ಜೋಗಿಹಟ್ಟಿ ಗ್ರಾಮಸ್ಥರು
ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!