ಮೊಬೈಲ್ ಆ್ಯಪ್ ಮೂಲಕ ದತ್ತಾಂಶ ಸಂಗ್ರಹದಲ್ಲಿ ಮಾದಿಗ ಎಂದು ಬರೆಯಿಸಿ ಹಿರೇಹಳ್ಳಿ ವಕೀಲ ಟಿ. ಮಲ್ಲೇಶ್.
ತಳಕು: ಒಳ ಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ಮಾದಿಗ ಎಂದು ಬರೆಸುವಂತೆ ಮೂಡಿಸಿದ ವಕೀಲ ಹಿರೇಹಳ್ಳಿ ಮಲ್ಲೇಶ್. ಜಾಗೃತಿ ಮೂಡಿಸಿದರು.
ಬುಧವಾರ ತಾಲೂಕಿನ ತಳಕು ಮತ್ತು ಹೊಸಹಳ್ಳಿ ಗ್ರಾಮದ ಏಕೆ ಕಾಲೋನಿಗಳಲ್ಲಿ ಭೇಟಿ ನೀಡಿ ದತ್ತಾಂಶ ಸಂಗ್ರಹದ ಗಣಿತಿದಾರರ ಮಾಹಿತಿ ಪಡೆದು ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು
ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗ ನೇತೃತ್ವದಲ್ಲಿ ಮೊಬೈಲ್ ಆಫ್ ಮೂಲಕ ಪರಿಶಿಷ್ಟ ಸಮುದಾಯ ದತ್ತಾಂಶ ಸಂಗ್ರಹ ಆರಂಭವಾಗಿದ್ದು ಪ್ರತಿಯೊಬ್ಬರು ಜಾತಿ ಸಮೀಕ್ಷೆಗೆ ಸಹಕರಿಸಿ ಜಾತಿ ಕಾಲಂ ನಂಬರ್ 61 ರಲ್ಲಿ ಮಾದಿಗ ಎಂದು ಬರೆಸಬೇಕು ಮುಂದಿನ ದಿನಗಳಲ್ಲಿ ಸರ್ಕಾರ ನಮಗೆ ಒಳ ಮೀಸಲಾತಿ ನೀಡುವ ವಿಶ್ವಾಸವಿದೆ ಮುಂದೆ ಮಾದಿಗ ಸಮುದಾಯಕ್ಕೆ ಮೂಲಭೂತ ಸೌಲಭ್ಯಗಳು ದೊರೆಯಲು ಮತ್ತು ಉದ್ಯೋಗ ಸಿಗಲು ಅನುಕೂಲವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಗ್ರಾಮಗಳಲ್ಲಿ ಜಾತಿ ಸಮೀಕ್ಷೆಗೆ ಸಹಕಾರ ನೀಡಿ ಎಂದರು.
ಇದೇ ಸಂದರ್ಭದಲ್ಲಿ ತಳಕು ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ, ಹಾಗೂ ಹೊಸಹಳ್ಳಿ ಮತ್ತು ತಳಕು ಗ್ರಾಮದ ಗ್ರಾಮಸ್ಥರಾದ ದುರಗಪ್ಪ,ಯಲ್ಲಪ್ಪ, ಕರಿಯಣ್ಣ, ತಿಪ್ಪೇಸ್ವಾಮಿ ನಿಂಗಮ್ಮ, ರಂಗಮ್ಮ, ಮಾರಕ್ಕ, ತಿಪ್ಪೇಸ್ವಾಮಿ, ಶಿಕ್ಷಕರಾದ ಬಿಎಲ್ಒ, ಚಿಟ್ಟಿಬಾಬು,ಪ್ರಕಾಶ್, ಬಸಮ್ಮ,ಸ್ವಪ್ನ, ಕವಿತ, ಗಂಗಣ್ಣ, ಶಿವಮ್ಮ, ಇದ್ದರು.

