filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.98261875, 0.4942858);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;

ಚಳ್ಳಕೆರೆ :
ವಿಶೇಷ ಚೇತನರು ಸಾಮಾನ್ಯರಂತೆ ಸಾಮಾಜಿಕವಾಗಿ ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದು ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ಹೇಳಿದರು.

ಅವರು ನಗರದ ನಗರಸಭೆ ಆವರಣದಲ್ಲಿ ನಡೆದ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮತ್ತು ಘನತ್ಯಾಜ್ಯ ವಾಹನಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿತರಣೆ ಮಾಡಿ ಮಾತನಾಡಿದರು.

ಚಳ್ಳಕೆರೆ ನಗರಸಭೆ ವತಿಯಿಂದ 2021-22, 2022-23 ಮತ್ತು 2023-2 4ನೇ ಸಾಲಿನ ಎಸ್.ಎಫ್.ಸಿ. ಮತ್ತು ನಗರಸಭಾ ನಿಧಿ ಶೇ. 05 ರಡಿಯಲ್ಲಿ ಎಲ್ಲಾ ವರ್ಗದ ವಿಕಲಚೇತನರಿಗೆ ತ್ರಿಚಕ್ರ ವಾಹನಗಳ ವಿತರಣೆ ಮತ್ತು ನಾನ್ ಮಿಲಿಯನ್ + ಎನ್.ಎಂ.ಪಿ. ಅನುದಾನದಡಿ 4 ಘನತ್ಯಾಜ್ಯ ವಾಹನಗಳ ವಿತರಣಾ ಕಾರ್ಯಕ್ರಮದಲ್ಲಿ 31 ತ್ರಿಚಕ್ರವಾಹನಗಳನ್ನು ಹಾಗೂ ನಾಲ್ಕು ಘನತಾಜ್ಯ ವಾಹನಗಳನ್ನು ವಿತರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಜಗ್ಗರೆಡ್ಡಿ, ನಗರಸಭೆ ಅಧ್ಯಕ್ಷರಾದ ಮಂಜುಳಾ ಆರ್ ಪ್ರಸನ್ನಕುಮಾರ್, ಉಪಾಧ್ಯಕ್ಷರಾದ ಕವಿತಾ ಬೋರಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್, ಸದಸ್ಯರುಗಳಾದ ರಮೇಶ್ ಗೌಡ, ರಾಘವೇಂದ್ರ, ಸುಮಾ ಭರಮಯ್ಯ, ಸುಜಾತ ಪ್ರಹ್ಲಾದ್, ಜಯಲಕ್ಷ್ಮಿ ಕೃಷ್ಣಮೂರ್ತಿ, ಹೊಯ್ಸಳ ಗೋವಿಂದ, ಚಳಕೆರಪ್ಪ, ನಾಮ ನಿರ್ದೇಶನ ಸದಸ್ಯರಾದ ಬಡಗಿ ಪಾಪಣ್ಣ, ವೀರಭದ್ರ, ಅನ್ವರ್ ಮಾಸ್ಟರ್, ನೇತಾಜಿ ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ಉಪ್ಪಾರ ಸಂಘದ ತಾಲ್ಲೂಕು ಅಧ್ಯಕ್ಷರಾದ ಹನುಮಂತಪ್ಪ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!