“ಶ್ರೀಶಾರದಾಶ್ರಮದಲ್ಲಿ ವಿನೋದದಿಂದ ವಿವೇಕ ವಿದ್ಯಾರ್ಥಿ ಶಿಬಿರ”.
ಚಳ್ಳಕೆರೆ-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ “ವಿನೋದದಿಂದ ವಿವೇಕ” ಎಂಬ ವಿಶಿಷ್ಟ ವಿದ್ಯಾರ್ಥಿ ಶಿಬಿರ ನಡೆಯಿತು.
ಈ ಶಿಬಿರದ ಭಾಗವಾಗಿ ಶ್ರೀಶಾರದಾಶ್ರಮದ ಸ್ವಯಂಸೇವಕರಾದ ಸಂತೋಷಕುಮಾರ್ ಮತ್ತು ಯತೀಶ್ ಎಂ ಸಿದ್ದಾಪುರ ಅವರು ಮಕ್ಕಳಿಗೆ ಭಜನೆ, ಮಂತ್ರಗಳ ಪಠಣ, ಪ್ರಯೋಗ ಮತ್ತು ಸೃಜನಶೀಲತೆಯನ್ನು ಬೆಳೆಸುವ ವಿವಿಧ ಆಟಗಳನ್ನು ಆಡಿಸಿದರು.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಮತ್ತು ಮಾತಾಜೀ ಜ್ಯೋತ್ಸ್ನಾಮಯೀ ವಹಿಸಿದ್ದರು.
ಈ ಸಂದರ್ಭದಲ್ಲಿ ಬಸವರಾಜ್, ಹೂವಿನ ಲಕ್ಷ್ಮೀದೇವಮ್ಮ, ಮಾಣಿಕ್ಯ ಸತ್ಯನಾರಾಯಣ, ಸತ್ಯಪ್ರಿಯ ಅಶೋಕ್, ಡಾ.ಭೂಮಿಕ, ದೈವಿಕ್,ಹರ್ಷಿತಾ, ಪ್ರತೀಕ್ಷಾ, ಧ್ರುವ ನಾರಾಯಣ, ನಿಖಿಲೇಶ್ ಯಾದವ್, ಯುಕ್ತ,ದವನ್, ವಿವಿಕ್ತ, ವರ್ಷ ಉಪಸ್ಥಿತರಿದ್ದರು.

