“ಏಕಾದಶಿಯಂದು ಶ್ರೀರಾಮನಾಮ ಸಂಕೀರ್ತನೆ ಮತ್ತು ಉಪವಾಸಕ್ಕೆ ಬಹಳ ಮಹತ್ವವಿದೆ” -ಶ್ರೀಮತಿ ಜಿ ಯಶೋಧಾ ಪ್ರಕಾಶ್ ಹೇಳಿಕೆ.
ಚಳ್ಳಕೆರೆ-ಏಕಾದಶಿಯಂದು ಮಾಡಲಾಗುವ ಶ್ರೀರಾಮನಾಮ ಸಂಕೀರ್ತನೆ ಮತ್ತು ಉಪವಾಸಕ್ಕೆ ಬಹಳ ಮಹತ್ವವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು. ಶಿವನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಏಕಾದಶಿಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಏಕಾದಶಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಈ ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ, ವಿಶೇಷ ಭಜನೆ ಮತ್ತು ಶ್ರೀಶಾರದಾದೇವಿ ಜೀವನಗಂಗಾ ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಭಾಗ್ಯಲಕ್ಷ್ಮೀ, ಶ್ರೀಮತಿ ನಾಗರತ್ನಮ್ಮ, ರಶ್ಮಿ ರಮೇಶ್,ಶಾರದಾಮ್ಮ, ಯತೀಶ್ ಎಂ ಸಿದ್ದಾಪುರ, ಉಷಾ ಶ್ರೀನಿವಾಸ್,ಸಂಗೀತ ವಸಂತಕುಮಾರ್, ಕೃಷ್ಣವೇಣಿ ವೆಂಕಟೇಶ್ ,ಜಯಮ್ಮ, ಮಾಣಿಕ್ಯ ಸತ್ಯನಾರಾಯಣ, ದ್ರಾಕ್ಷಾಯಣಿ, ಸೌಮ್ಯ ಪ್ರಸಾದ್,ಗೀತಾಲಕ್ಷ್ಮೀ,ಮಂಗಳ ಜಿ.ಪಿ ಉಪಸ್ಥಿತರಿದ್ದರು.

