. ನಾಯಕನಹಟ್ಟಿ ಮಂಡಲ ವತಿಯಿಂದ ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಖಂಡಿಸಿ ಕ್ಯಾಂಡಲ್ ಹಚ್ಚಿ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿದರು.

ನಾಯಕನಹಟ್ಟಿ: ಬುಧವಾರ ರಾತ್ರಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಉಗ್ರರ ದಾಳಿ ಖಂಡಿಸಿ ಬಿಜೆಪಿ ನಾಯಕನಹಟ್ಟಿ ಮಂಡಲ ವತಿಯಿಂದ ಕೈಯಲ್ಲಿ ದೀಪ ಹಿಡಿದು ಪ್ರತಿಭಟನೆ ನಡೆಸಿದರು. ಹಾಗೂ ಮೃತರ ಆತ್ಮಕ್ಕೆ ಶಾಂತಿಕೋರಿ ಶ್ರದ್ದಾಂಜಲಿ ಅರ್ಪಿಸಿದರು.

ನಿಕಟ ಪೂರ್ವ ಮಂಡಲ ಅಧ್ಯಕ್ಷ ಎಂ.ವೈ.ಟಿ ಸ್ವಾಮಿ ಮಾತನಾಡಿದರು ಪ್ರವಾಸಕ್ಕೆಂದು ಹೋದ ನಾಗರಿಕರ ಮೇಲೆ ಉಗ್ರರು ದಾಳಿ ನಡೆಸಿರುವುದು ಖಂಡನೀಯ. ಕಾಶ್ಮೀರದ ಪಹಲ್ಗಾಹಮ್ ದಾಳಿಯಲ್ಲಿ 26 ಮಂದಿ ಅಮಾಯಕರನ್ನು ಕಗ್ಗೊಲೆ ಮಾಡಿರುವುದು ವಿರೋಧಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಇಡೀ ಭಾರತ ದೇಶದಲ್ಲಿ ಕ್ಯಾಂಡಲ್ ಹಚ್ಚಿ ಶಾಂತಿ ಕೋರಲಾಗಿದೆ ಹಿಂದೆ ಸಹ ಪಹಲ್ಗಾಮ್ ದಾಳಿ ನಡೆದಿತ್ತು ನಾವು ಹಿಂದೂಗಳೆಲ್ಲ ಒಗ್ಗಟ್ಟಾಗಬೇಕು ನಮ್ಮಲ್ಲಿ ಜಾತಿ ಜಾತಿ ಎಂದು ಕಿತ್ತಾಡುತ್ತೇವೆ ಪಹಲ್ಗಾಮ್ ದಾಳಿಯಲ್ಲಿ ಹಿಂದೂ ಎಂದರೆ ಸಾಯಿಸ್ತಾರೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಹಿಂದೂಗಳು ನಾವು ದೇಶದ ರಕ್ಷಣೆಗೆ ಮುಂದಾಗಬೇಕು ಭಾರತ ದೇಶದಲ್ಲಿ ಅಶಾಂತಿ ನಿರ್ಮಾಣವಾಗಿದೆ ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಅಮಿತ್ ಶಾ ರವರು ಉಗ್ರರನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯತಿ ಸದಸ್ಯ ಎನ್ ಮಹಾಂತಣ್ಣ,ಹಾಗೂ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ. ಶಿವಣ್ಣ, ಮಾತನಾಡಿದರು

ಇದೆ ವೇಳೆ ಮಂಡಲ ಪ್ರಧಾನ ಕಾರ್ಯದರ್ಶಿ, ಬೆಂಕಿ ಗೋವಿಂದಪ್ಪ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ಒ. ಬೋಸೆರಂಗಪ್ಪ, ನಗರ ಘಟಕ ಪ್ರಧಾನ ಕಾರ್ಯದರ್ಶಿ ರಾಜು. ಮಂಡಲ ಎಸ್ ಟಿ ಮೋರ್ಚಾ ಕಾರ್ಯಕಾರಣಿ ಸದಸ್ಯ ಜಿ.ಬಿ. ಲೋಕೇಶ್, ರಾಮಸಾಗರ ಬೂತ್ ಅಧ್ಯಕ್ಷ ಸಣ್ಣಪಾಲಯ್ಯ, ಮಂಡಲ ಯುವ ಮೋರ್ಚ ಅಧ್ಯಕ್ಷ ವಿಷ್ಣು, ಇನ್ನೂ ಮುಂತಾದವರು ಇದ್ದರು.

About The Author

Namma Challakere Local News
error: Content is protected !!