ಚಳ್ಳಕೆರೆ :
ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹುಂಡಿಯಲ್ಲಿ : ₹ 66.29.155-00.ಲಕ್ಷ ಸಂಗ್ರಹ.
ಏಪ್ರಿಲ್‌ 23
ನಾಯಕನಹಟ್ಟಿ: ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಜಾತ್ರೆ ನಂತರ ಹುಂಡಿ ಹಣದ ಎಣಿಕೆ ಕಾರ್ಯವನ್ನು ಬುಧವಾರ ದೇವಾಲಯದ ಆವರಣದಲ್ಲಿ ಬ್ಯಾಂಕ್‌ ಕಂದಾಯ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ನಡೆಸಲಾಯಿತು.
ವಾರ್ಷಿಕ ಜಾತ್ರೆ ಹಾಗೂ ಮರಿಪರಿಷೆಯ ನಂತರ ಹುಂಡಿ ಹಣದ ಎಣಿಕೆ ಕಾರ್ಯ ಮಾಡಲಾಗುತ್ತದೆ. ಮೊದಲು ಹೊರಮಠ ದೇವಾಲಯದಲ್ಲಿ ಮುಜರಾಯಿ ಹಾಗೂ ಕಂದಾಯ ಇಲಾಖೆಯ ಹಾಗೂ ದೇವಾಲಯ ಕಾರ್ಯನಿರ್ವಹಣಾಧಿಕಾರಿ
ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ಶುರುವಾದ ಎಣಿಕೆ ಕಾರ್ಯ ಮಧ್ಯಾಹ್ನ ಗಂಟೆಗೆ ಮುಕ್ತಾಯವಾಯಿತು. ನಂತರ ಒಳಮಠದಲ್ಲಿ ಆರಂಭವಾದ ಣಿಕೆ ಕಾರ್ಯ ಸಂಜೆ 6 ಗಂಟೆಗೆ ನಾಯಕನಹಟ್ಟಿ ಪಟ್ಟಣದ ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಬುಧವಾರ ದೇವರ ಹುಂಡಿ ಹಣವನ್ನು ಎಣಿಸಲಾಯಿತು, ಮುಕ್ತಾಯವಾಯಿತು.
ಹೊರಮಠದಲ್ಲಿ ₹19.00,095 -00.
ಒಳಮಠದಲ್ಲಿ ₹47.29,060-00 ಸಂಗ್ರಹವಾಗಿದೆ. ಒಟ್ಟಾರೆಯಾಗಿ ಈ ವರ್ಷದ ಜಾತ್ರೆಯಲ್ಲಿ ₹ 66.29.155.-00
ಹಣ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು.
ಹುಂಡಿಗಳಲ್ಲಿ ಬೆಳ್ಳಿ ನಾಣ್ಯಗಳು, ಬೆಳ್ಳಿ ತೊಟ್ಟಿಲು, ಇನ್ನಿತರ ಬೆಳ್ಳಿ ಆಭರಣಗಳು ಕಂಡು ಬಂದವು.

ಇದೇ ವೇಳೆಯಲ್ಲಿ ಮುಜರಾಯಿ ಇಲಾಖೆ ಅಧಿಕಾರಿ ಸದಾಶಿವಪ್ಪ ಮಾತನಾಡಿದರು ಮಾನ್ಯ ಜಿಲ್ಲಾಧಿಕಾರಿ ಮತ್ತು ಅಪಾರ ಜಿಲ್ಲಾಧಿಕಾರಿಗಳು ತಾಲೂಕು ದಂಡಾಧಿಕಾರಿ ನಿರ್ದೇಶನದಂತೆ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠ ಮತ್ತು ಒಳಮಠದಲ್ಲಿ ಭಕ್ತರಿಂದ ಹಣ ಸಂಗ್ರಹವಾದ ಹುಂಡಿ ಎಣಿಕೆ ಕಾರ್ಯವನ್ನು ಆರಂಭಿಸಲಾಗಿದೆ ಎರಡು ಮಠಗಳಲ್ಲಿ ಸಂಗ್ರಹವಾದ ಹಣವನ್ನು ಕೆನರಾ ಬ್ಯಾಂಕ್ ದೇವಸ್ಥಾನದ ಖಾತೆಗೆ ಜಮಾ ಮಾಡಲಾಗುತ್ತದೆ ಭಕ್ತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತನು ಮನ ಧನ ಸಹಾಯವನ್ನು ಮಾಡಿ ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ಮಾಡುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ ಮಾತನಾಡಿದರು ಪ್ರತಿ ವರ್ಷ ಸಾಂಪ್ರದಾಯದಂತೆ ಈ ವರ್ಷವೂ ಸಹ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ಜಾತ್ರೆ ಮತ್ತು ಮರಿಪರಿಷೆ ನಂತರ ಹುಂಡಿ ಎಣಿಕೆ ಕಾರ್ಯವನ್ನು ಮಾಡಲಾಗುತ್ತದೆ, ಸಂಗ್ರಹವಾದ ಹಣವನ್ನು ಸರ್ಕಾರಕ್ಕೆ ನೀಡದೆ ದೇವಸ್ಥಾನ ಅಭಿವೃದ್ಧಿ ಹಾಗೂ ಭಕ್ತಾರಿಗೆ ಮೂಲಸೌಲಭ್ಯ ಬಳಸಲಾಗುವುದು ಎಂದರು..

ಕಂದಾಯ ಇಲಾಖೆ ಸಿಬ್ಬಂದಿ ಜಗದೀಶ್, ಶಂಕರ್‌, ಕೆನರಾಬ್ಯಾಂಕ್ ವ್ಯವಸ್ಥಾಪಕ ಲೋಹಿತ್, ಸಿಬ್ಬಂದಿ ವಿರೂಪಾಕ್ಷಪ್ಪ, ರಘು ಕೆ.ಮೂರ್ತಿ, ನಲಗೇತನಹಟ್ಟಿ ಎಂ. ಬಿ. ಮಹಾಸ್ವಾಮಿ, ವೀರಭದ್ರಪ್ಪ, ಕೆ.ಬಿ.ಪುರಂದರ್, ದೇವಾಲಯ ಸಿಬ್ಬಂದಿ ಎಸ್‌.ಸತೀಶ್‌, ಮನು, ಮಂಜುನಾಥ, ಶಿವಣ್ಣ,, ಮಹಾದೇವ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!