ಚಳ್ಳಕೆರೆ :

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ಚಳ್ಳಕೆರೆ ತಾಲೂಕು ವತಿಯಿಂದ ತಾಲೂಕು ಕಚೇರಿಯ ಮುಂದೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಮಾಡಲಾಯಿತು

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ
ಜಮ್ಮು ಕಾಶ್ಮೀರದಲ್ಲಿಏ. 22ರಂದು ಉಗ್ರರು ಹಿಂದುಗಳನ್ನು ಗುರಿಯಾಗಿಸಿಕೊಂಡು ಕೊಂದಿರುವುದನ್ನು ಖಂಡಿಸುತ್ತೇವೆ ಉಗ್ರರು ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲೂ ಕೂಡ ಇವರ ಎಲ್ಲಾ ದೇಶಗಳು ನಲಿಗೆ ಹೋಗಿವೆ ಆದರಿಂದ ಪ್ರಪಂಚದ ಎಲ್ಲಾ ದೇಶಗಳು ಒಟ್ಟಾಗಿ ಉಗ್ರರನ್ನು ನಿರ್ಮೂಲನೆ ಮಾಡಬೇಕೆಂದು ಶಪಥ ಮಾಡಬೇಕು.

ರೈತರ ಹೊಲಗಳಿಗೆ ಹೋಗುವ ಬಂಡಿ ದಾರಿ ಕಾಲುದಾರಿ ರೂಡಿಗತದಾರಿ ನಕಾಶದಾಡಿಗಳನ್ನು ಹಾಗೂ ದಾರಿ ದಾಖಲೆಗಳಿಲ್ಲದೆ ಕೈತಪ್ಪಿ ಹೋಗಿದ್ದು ಈ ಸಮಸ್ಯೆಗಳನ್ನು ಕಾನೂನು ಬದ್ಧವಾಗಿ ದಾರಿ ಮಾಡಿ ಕೊಡಿಸಬೇಕು
ರಸ್ತೆ ರೈಲು ಸರ್ಕಾರಿ ಕಚೇರಿಗಳಿಗೆ ಸರ್ಕಾರ ಭೂಸ್ವಾಧೀನ ಮಾಡಿಕೊಂಡಿದ್ದು ಅಗತ್ಯಕ್ಕೆ ತಕ್ಕಂತೆ ಜಮೀನು ಸ್ವಾಧೀನ ಪಡಿಸಿಕೊಂಡಿರುತ್ತಾರೆ ಆದರೆ ಉಳಿದ ಜಮೀನನ್ನು ವಜಾ ಮಾಡದೆ ರೈತರು ಜಿಲ್ಲಾ ಸರ್ವೆ ಇಲಾಖೆಗೆ ಮತ್ತು ತಾಲೂಕು ಸರ್ವೆ ಇಲಾಖೆಗೆ ಅಲೆದಾಡುವ ಪರಿಸ್ಥಿತಿ ಬಂದಿದೆ.

ಬೇಡ ರೆಡ್ಡಿ ಹಳ್ಳಿಯಿಂದ ದೇವರಡ್ಡಿಹಳ್ಳಿವರೆಗೆ ಹಾಗೂ ಹಿರೇಹಳ್ಳಿ ಇಂದ ದೇವರೆಡ್ಡಿಹಳ್ಳಿ ರಸ್ತೆಯವರೆಗೆ ರಸ್ತೆಯು ಎರಡು-ಮೂರು ಅಡಿ ತಗ್ಗು ಗುಂಡಿಗಳು ಬಿದ್ದಿದ್ದು ರಸ್ತೆ ಬಿಟ್ಟು ಪ್ರಯಾಣಕರು ಓಡಾಡುತ್ತಿದ್ದರು ಪಿಡಬ್ಲ್ಯೂಡಿ ಇಲಾಖೆ ಕಣ್ಮುಚ್ಚಿ ಕುಳಿತಿದೆ ತಕ್ಷಣವೇ ಹೊಸ ಡಾಂಬರೀಕರಣ ಮಾಡಬೇಕು
ತಾಲೂಕು ಪಂಚಾಯಿತಿ ಅಧಿಕಾರಿಗಳು ಕಳೆದ ತಿಂಗಳು ನಡೆದ ಸಭೆಯಲ್ಲಿ 10 ದಿನಗಳ ಒಳಗಾಗಿ ಹಗಲಿನಲ್ಲಿ ಉರಿಯುತ್ತಿರುವ ಬೀದಿ ದೀಪಗಳನ್ನು ಹಾರಿಸುತ್ತೇವೆಂದು ಭರವಸೆ ನೀಡಿದ್ದರು.

ಗ್ರಾಮ ಪಂಚಾಯಿತಿ ಪಿಡಿಒಗಳ ನಿರ್ಲಕ್ಷ್ಯ ವಹಿಸಿ ಲಕ್ಷಾಂತರ ರೂಪಾಯಿಗಳು ಸರ್ಕಾರಕ್ಕೆ ನಷ್ಟ ಮಾಡುತ್ತಿದ್ದಾರೆ
ಬೆಸ್ಕಾಂ ನವರು ಸಹ ವಿದ್ಯುತ್ ಲೈನ್ ಗಳಿರುವ ಮರ ಗಿಡ ಬಳ್ಳಿ ತೆರವು ಗೊಳಿಸಿ ಸೋರಿಕೆ ಆಗುತ್ತಿರುವ ವಿದ್ಯುತ್ ತಡಿಯುತ್ತೇವೆಂದು ಹೇಳಿ ಭರವಸೆ ನೀಡಿದರು ಸಮಗ್ರವಾಗಿ ಕೆಲಸ ಮಾಡುತ್ತಿಲ್ಲ
ಎನ್ಎಚ್ 150 A ಹಿರೇಹಳ್ಳಿ ಟೋಲ್ ಇಂದ ಚಿಕ್ಕಳ್ಳಿಗೆ ಹೋಗಲು ಬಲಭಾಗದಲ್ಲಿ ರಸ್ತೆ ನಿರ್ಮಿಸಿ ಕೊಡುತ್ತೇವೆಂದು ಹಾಗೂ ಚಿಕ್ಕಳ್ಳಿ ಹಿರೇಹಳ್ಳಿ ಬುಕ್ಲಾರಹಳ್ಳಿ ಬಸ್ ನಿಲ್ದಾಣಗಳನ್ನು ನಿರ್ಮಿಸುತ್ತೇವೆಂದು ಭರವಸೆ ನೀಡಿದ್ದರು ಆದರೆ ಯಾವುದೇ ಕಾಮಗಾರಿ ನಡೆದಿಲ್ಲ
ಕೆ ಎಸ್ ಆರ್ ಟಿ ಸಿ ಸರ್ಕಾರಿ ಬಸ್ಸುಗಳು ಹಳ್ಳಿಗಳಿಗೆ ಶಾಲಾ ಮಕ್ಕಳಿಗೆ ಅನುಕೂಲ ವಾಗುವಂತೆ ಎನ್ ದೇವರಹಳ್ಳಿ ತಿಮ್ಮಪ್ಪಯ್ಯನಹಳ್ಳಿ ಕೆರೆಯಾಗಳ ಹಳ್ಳಿ ಗಳಿಗೆ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು ಮತ್ತು 150 ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಹಳ್ಳಿಗಳಿಗೆ ಸರ್ಕಾರಿ ಬಸ್ಸುಗಳು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಚಳುವಳಿಯಲ್ಲಿ ಭಾಗವಹಿಸಿದ ಮುಖಂಡರಾದ
ಚಳ್ಳಕೆರೆ ತಾಲೂಕ ಅಧ್ಯಕ್ಷರಾದ ಮಲ್ಲಸಮುದ್ರ ಗಂಗಾಧರ , ಮಲ್ಲಹಳ್ಳಿ ರವಿಕುಮಾರ್, ಮೊಳಕಾಲ್ಮೂರು ತಾಲೂಕ ಅಧ್ಯಕ್ಷರಾದ ಸೂರಮನಹಳ್ಳಿ ರಾಜಣ್ಣ, ಚಿಕ್ಕಳ್ಳಿ ವೆಂಕಟೇಶ್ ರೆಡ್ಡಿ,, ಸಣ್ಣ ತಿಪ್ಪೇಸ್ವಾಮಿ , ನಾಗೇಶ್, ಹಿರೇಹಳ್ಳಿ ಮಂಜಣ್ಣ, ತಿಪ್ಪೇಸ್ವಾಮಿ, ಹೊನ್ನೂರು ಶ್ರೀನಿವಾಸ್, ಚಿಕ್ಕಳ್ಳಿ ಶ್ರೀನಿವಾಸ್, ನಾಗೇಶ್ ರೆಡ್ಡಿ, ಸತೀಶ್ ರೆಡ್ಡಿ ,, ಪ್ರಶಾಂತ್ ರೆಡ್ಡಿ, ಮಲ್ಲ ಸಮುದ್ರ ಚಿತ್ತಯ್ಯ ಮುಂತಾದ ಮುಖಂಡರುಗಳು ಭಾಗವಹಿಸಿದ್ದರು

About The Author

Namma Challakere Local News
error: Content is protected !!