ಚಳ್ಳಕೆರೆ :
ದೇವಸ್ಥಾನದಲ್ಲಿ ಊಟ ಸೇವಿಸಿದ ಭಕ್ತರಿಗೆ ವಾಂತಿಭೇಧಿ ಮುನ್ನೆಚ್ಚರಿಕೆಯಾಗಿ ಆಸ್ವತ್ರೆಗೆ ದಾಖಲು..
ತಾಲ್ಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿರುವ
ಮಾರಮ್ಮದೇವಿಗೆ ಪ್ರತಿಮಂಗಳವಾರ ಭಕ್ತರು ಸಿಹಿ ಹೋಳಿಗೆ
ಸಿದ್ದಪಡಿಸಿ ದೇವರಿಗೆ ಅರ್ಪಿಸಿ ಭಕ್ತರಿಗೆ (Challakere) ಹೋಳಿಗೆ
ಊಟವನ್ನು ಊಣಬಡಿಸುವುದು ವಾಡಿಕೆಯಾಗಿದೆ.
ಕಳೆದ ಹಲವಾರು ವರ್ಷಗಳಿಂದ ಈ ಪದ್ಧತಿ ನಡೆದುಬಂದಿದ್ದು, ದೇವಿಗೆ
ಹರಿಕೆ ಹೊತ್ತವರು ಹೋಳಿಗೆ ಊಟವನ್ನು ಭಕ್ತರಿಗೆ ನೀಡುತ್ತಾರೆ.
ಅದರಂತೆ ಏ.22ರ ಮಂಗಳವಾರ ಮಧ್ಯಾಹ್ನ ಪೂಜೆ ನಂತರ ಅಲ್ಲಿದ್ದ
ಭಕ್ತರಿಗೆ ಹೋಳಿಗೆ ಊಟ ನೀಡಲಾಗಿದೆ. ಊಟ ಸೇವಿಸಿದ ಮೇಲೆ
ಯಾವುದೇ ಪರಿಣಾಮ ಆಗದಿದ್ದರೂ ಸಂಜೆ ಮಾತ್ರ ಕೆಲವರಿಗೆ
ವಾಂತಿ, ಭೇದಿ ಆರಂಭವಾಗಿದೆ. ಬುಧವಾರ ಬೆಳಗ್ಗೆ ಇನ್ನೂ ಹೆಚ್ಚು ಜನ
ವಾಂತಿ, ಭೇದಿ ಆರಂಭವಾದಾಗ ಗೋಪನಹಳ್ಳಿ ಪ್ರಾಥಮಿಕ ಆರೋಗ್ಯ
ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸುಮಾರು 68ಕ್ಕೂ ಹೆಚ್ಚು ಜನರಿಗೆ
ಚಿಕಿತ್ಸೆ ನೀಡಿ ಕಳಿಸಲಾಗಿದೆ. ಬುಧವಾರ ಮಧ್ಯಾಹ್ನ 4 ರ ಸಮಯದಲ್ಲಿ
ಹೋಳಿಗೆ ಊಟ ಮಾಡಿದವರಿಗೆ ಮತ್ತೆ ವಾಂತಿ, ಬೇಧಿ (Challakere)
ಆರಂಭವಾಗಿದೆ ಸುಮಾರು 68ಕ್ಕೂ ಹೆಚ್ಚು ಜನರಿಗೆ ವಾಂತಿ,
ಬೇದಿಯಾಗಿದ್ದು ಗಾಬರಿಗೊಂಡ ಭಕ್ತರು ಕೂಡಲೇ ಸಾರ್ವಜನಿಕ
ಆಸ್ಪತ್ರೆ ದಾಖಲಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಯೋವೃದ್ಧರು,
ಮಹಿಳೆಯರು, ಪುರುಷರು, ಮಕ್ಕಳಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ
ಪಡೆದಿದ್ದಾರೆ.
ಸುದ್ದಿ ತಿಳಿದ ತಹಶೀಲ್ದಾರ್ ರೇಹಾನ್‌ಪಾಷ, ಡಿವೈಎಸ್ ಪಿ ಬಿಟಿ.ರಾಜಣ್ಣ, ಆಸ್ಪತ್ರೆಗೆ ದಾಖಲಿಸಿ
ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ.
ಈ ಸಂದರ್ಭದಲ್ಲಿ ವಾಂತಿ,
ಬೇದಿಯಿಂದ ಆಸ್ಪತ್ರೆಗೆ ದಾಖಲಾದ ಹಲವಾರು ರೋಗಿಗಳು ಯಾವ
ಕಾರಣದಿಂದ ವಾಂತಿಯಾಗಿದೆ. (Challakere) ಎಂಬುವುದು
ತಿಳಿಯುತ್ತಿಲ್ಲ ಗ್ರಾಮದಲ್ಲಿ ನೀರು ಕಾರಣವೇ ಅಥವಾ
ಬೇರೆಯಾವುದು ಸಮಸ್ಯೆ ಎಂಬ ಬಗ್ಗೆ ಗ್ರಾಮಸ್ಥರು ಯಾವುದೇ
ನೀಡುತ್ತಿಲ್ಲ. ಒಟ್ಟಿನಲ್ಲಿ ಗಾಬರಿಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ
ಪಡೆದಿದ್ದಾರೆ.
ಕರ್ತವ್ಯ ನಿರತ ವೈದ್ಯ ಡಾ.ಡಿ.ಆರ್.ಮಂಜಪ್ಪ ರೋಗಿಗಳಿಗೆ ತುರ್ತು
ಚಿಕಿತ್ಸೆ ನೀಡಿ ಯಾವ ಕಾರಣದಿಂದ ವಾಂತಿ, ಭೇದಿಯಾಗುತ್ತಿದೆ ಎಂಬ
ಬಗ್ಗೆ ಇನ್ನು ತಿಳಿದಿಲ್ಲ. ಆಸ್ಪತ್ರೆಗೆ ದಾಖಲಾದ ಎಲ್ಲಾ ರೋಗಿಗಳಿಗೆ
ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಆಗಮಿಸಿ ಮಾಹಿತಿ
ಪಡೆದಿದ್ದಾರೆ. ಪ್ರಸ್ತುತ ಬಹುತೇಕ ಎಲ್ಲಾ ರೋಗಿಗಳು ವಾರ್ಡ್ಗಳಲ್ಲಿ
ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಯಾವುದೇ
ಪ್ರಾಣಾಪಾಯವಿಲ್ಲವೆಂದು ತಿಳಿಸಿದ್ದಾರೆ.

