ಚಳ್ಳಕೆರೆ :
ಚಳ್ಳಕರೆ ಮತ್ತು ಮೊಳಕಾಲ್ಮುರು ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಏಕ ರೂಪ ತಂತ್ರಾoಶವನ್ನು (Amcs )ಅಳವಡಿಸಿಕೊಳ್ಳುವ ಮೂಲಕ ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಇಂದು ಕಾರ್ಯದರ್ಶಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಚಳ್ಳಕೆರೆಯ ಉಪ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂಧರ್ಭದಲ್ಲಿ
ಬೆಳಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ
2024-25 ನೇ ಸಾಲಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಒಕ್ಕೂಟದಿಂದ ಬಿಡುಗಡೆಯಾದ ಮೊದಲ ಕಂತಿನ ಕಟ್ಟಡ ಅನುದಾನದ ಬಾಬ್ತು 1.50 ರೂ ಗಳ ಚೆಕ್ ಅನ್ನು ಇಂದು ನಡೆದ ಕಾರ್ಯದರ್ಶಿಗಳ ತರಬೇತಿ ಕಾರ್ಯಾಗಾರದಲ್ಲಿ ಬೆಳಗೆರೆ ಸಂಘದ ಕಾರ್ಯದರ್ಶಿಗಳಿಗೆ ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರಾದ ಬಿ ಸಿ ಸಂಜೀವ ಮೂರ್ತಿರವರು ಹಸ್ತಾoತರಿಸಿದರು.
ಈ ಸಂಧರ್ಭದಲ್ಲಿ ವಿಭಾಗಾಧಿಕಾರಿಗಳಾದ ಎಂ ಪುಟ್ಟರಾಜು,ತರಬೇತಿ ಕಾರ್ಯಾಗಾರಕ್ಕೆ ಮಾರ್ಗದರ್ಶಕರಾಗಿ ಬಂದಿದ್ದ ಒಕ್ಕೂಟದ ಉಪ ವ್ಯವಸ್ಥಾಪಕರಾದ ಅನುಷಾ, ವಿಸ್ತರಣಾಧಿಕಾರಿಗಳಾದ ನಯಾಜ್ ಬೇಗ್ ರವರು ಉಪಸ್ಥಿತರಿದ್ದರು.

