ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭ ಮಹಿಳಾ ಘಟಕ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಸಂಘದ ವತಿಯಿಂದ ಪಕ್ಷಿಗಳಿಗೆ ಕಾಳು ನೀರು….

ಚಳ್ಳಕೆರೆ :
ಬೇಸಿಗೆಯಲ್ಲಿ ನೀರಿನ ಮೂಲಗಳು ಬತ್ತಿ ಹೋಗುತ್ತವೆ ಇತಂಹ ಸಮಯದಲ್ಲಿ ಹನಿ ನೀರಿಗೂ ಸಹ ಹಾಹಾಕಾರವಾಗುತ್ತದೆ.ಮನುಷ್ಯರಾದ ನಾವು ಬೇಕಿದ್ದನ್ನ ಕೇಳಿ ಪಡೆಯುತ್ತೆವೆ ಆದರೆ, ಪ್ರಾಣಿ ಪಕ್ಷಿಗಳು ಹಾಗೆ ಮಾಡಲು ಸಾಧ್ಯವಿಲ್ಲ.‌

ಇದರಿಂದ ಪಕ್ಷಿಗಳಿಗೆ ಕುಡಿಯಲು ನೀರು ಹಾಗೂ ಕಾಳುಗಳನ್ನ ಇಟ್ಟು ಪಕ್ಷಿ ಸಂಕುಲವನ್ನ ಕಾಪಾಡಬೇಕಿದೆ‌…
ರಾಜ್ಯದಲ್ಲಿ ಅತಿ ಕಡಿಮೇ ಪ್ರದೇಶ ಹಾಗೂ ಬಯಲು ನಾಡು ಬರದನಾಡು ಎಂದೇ ಪ್ರಖ್ಯಾತಿಗೊಂಡಿದೆ.

ಇಂತಹ ಬಯಲನಾಡಿನಲ್ಲಿ ನೀರಿನ ಮೂಲಗಳ ಇರುವುದೇ ಕಡಿಮೆ. ಇದನ್ನು ಅರಿತು ಪಕ್ಷಿಗಳಿಗೆ ಮನೆಯ ಟೆರಸ್ ಮೇಲೆ, ಮನೆಯ ಮುಂಭಾಗ ಮರಗೆಡೆಗಳಿಗೆ ಡಬ್ಬಿಗಳಲ್ಲಿ ನೀರನ್ನ ಹಾಕುವುದರ ಮೂಲಕ ಪಕ್ಷಿ ಸಂಕುಲವನ್ನು ಕಾಪಾಡಬೇಕಾಗಿದೆ.

ಇಂತಹ ಕಾರ್ಯವನ್ನ ಇಂದು ಚಳ್ಳಕೆರೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಸಂಘ ವತಿಯಿಂದ ಚಿತ್ರದುರ್ಗ ರಸ್ತೆಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ನೀರು ಹಾಗೂ ವಿವಿಧ ಕಾಳುಗಳನ್ನ ಇಡುವುದರ ಮೂಲಕ ಶ್ರೀ ರಾಮನವಮಿ ಆಚರಣೆ ಮಾಡಲಾಯಿತು…

ನೀರಿನ ಬಾಟಲಿಗಳನ್ನ ಅರ್ದಕ್ಕೆ ಕಟ್ ಮಾಡಿ ಈ ಬಾಟಲಿಗಳಿಗೆ ನೀರು ಹಾಗೂ ಅಕ್ಕಿ ,ರಾಗಿ.ಗೋದಿ.ಜೋಳಗಳನ್ನ ಹಿಡಲಾಯಿತು.
ಎರಡು ದಿನಕ್ಕೊಮ್ಮೆ ನೀರು ಇಟ್ಟಿರುವ ಸ್ಥಳಕ್ಕೆ ಬಂದು ಮತ್ತೆ ನೀರು ಕಾಳುಗಳನ್ನ ಇಡಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷೆ ಎಂಬಿ. ಭಾಗ್ಯಮ್ಮ, ಕಿತ್ತೂರ ರಾಣಿ ಚೆನ್ನಮ್ಮ ಸಂಘದ ಶುಭ ಸೋಮಶೇಖರ್,ಸೌಭಾಗ್ಯ ಶ್ರೀಕಾಂತ ತಿಳಿಸಿದರು……..

About The Author

Namma Challakere Local News
error: Content is protected !!