ನಾಟಕದಲ್ಲಿ ಬರುವ ಉತ್ತಮ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಗೌಡಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ. ನಿಂಗಪ್ಪ

ಚಳ್ಳಕೆರೆ : ಪ್ರತಿಯೊಬ್ಬರೂ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡಬೇಕು ಎಂದು ಗೌಡಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ ನಿಂಗಪ್ಪ ಹೇಳಿದರು.

ಶನಿವಾರ ರಾತ್ರಿ ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ ಜೋಗಿಹಟ್ಟಿ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರ ಯುವ ನಾಟ್ಯ ಕಲಾ ಸಂಘ ವತಿಯಿಂದ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಪ್ರೇಮ ತ್ಯಾಗ ಅರ್ಥ ಮಗಳಿಗೆ ಮಾಂಗಲ್ಯ ತಂದೆಗೆ ಸ್ಮಶಾನ ಎಂಬ ಸುಂದರ ಸಾಮಾಜಿಕ ನಾಟಕವನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಅವರು. ಸಾಮಾಜಿಕ ನಾಟಕಗಳಲ್ಲಿ ಸಂದೇಶದ ಸಾರವೆ ಅಡಗಿದೆ. ಸಮಾಜದಲ್ಲಿರುವ ಹಲವಾರು ಅಂಕಡೊಂಕುಗಳನ್ನು ತಿಳಿಸಿಕೊಡುವ ಸಾಮಾಜಿಕ ನಾಟಕಗಳು ಹೆಚ್ಚಾಗಿ ನಡೆಯಬೇಕು ಸಾಮಾಜಿಕ ನಾಟಕಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಡಿ.ಜಿ. ಗೋವಿಂದಪ್ಪ ಮಾತನಾಡಿದರು. ಸಾಮಾಜಿಕ ನಾಟಕದಲ್ಲಿ ಅನೇಕ ಪಾತ್ರಗಳ ಮೂಲಕ ನಾಟಕವನ್ನು ಪ್ರದರ್ಶನ ಮಾಡಲಾಗುತ್ತದೆ ನಾಟಕದಲ್ಲಿ ಹೀರೋ. ಖಳನಾಯಕ. ಕಾಮಿಡಿ. ಹೀಗೆ ಅನೇಕ ಪಾತ್ರಗಳು ಬರುತ್ತವೆ ಅದರಲ್ಲಿ ಒಳ್ಳೆಯ ಸಂದೇಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಉತ್ತಮ ಜೀವನವನ್ನು ಸಾಗಿಸಲು ಪ್ರೇರಣೆಯಾಗಬೇಕು ಎಂದರು.

ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಲಿ ಸದಸ್ಯ ಟಿ. ರಂಗಪ್ಪ ಗೌಡಗೆರೆ ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನಿಗೂ ಸಂಗೀತ ಜೀವನದ ಒಂದು ಭಾಗ ಅದು ಕೇವಲ ಮನರಂಜನೆಗೆ ಸೀಮಿತವಾಗದೆ ಸಾಮಾಜಿಕ ಬದಲಾವಣೆಗೆ ಪೂರಕವಾಗುವ ಕಲೆ ಸಂಸ್ಕೃತಿಯಾಗಬೇಕಾಗಿದೆ ಬದಲಾಗುತ್ತಿರುವ ಆಧುನಿಕ ಯುಗದಲ್ಲಿ ಯುವ ಜನಾಂಗವು ಕೇವಲ ಟಿವಿ ಮೊಬೈಲ್ ಯುಗದಲ್ಲಿ ತಾಂತ್ರಿಕತೆಗೆ ಮಾರುವಾಗದೆ ಕಲೆ ಸಂಸ್ಕೃತಿಯ ಅರಿವು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು

ಇದೇ ಸಂದರ್ಭದಲ್ಲಿ ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಸರೋಜಮ್ಮ ಕರಿಬಸವರಾಜ, ಜಿ.ಓ. ಓಬಳೇಶ್, ಎಸ್. ಎನ್ ನಾಗಪ್ಪ, ಮಂಜಮ್ಮ ರಂಗಸ್ವಾಮಿ, ಸಣ್ಣಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಯರ್ರಿಸ್ವಾಮಿ, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಎ.ಜಿ. ತಿಪ್ಪೇಸ್ವಾಮಿ, ಬಿ. ಜಯಣ್ಣ, ಎಚ್. ಬಿ. ತಿಪ್ಪೇಸ್ವಾಮಿ, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ. ತಿಪ್ಪೇಸ್ವಾಮಿ ಗೌಡಗೆರೆ, ಗುತ್ತಿಗೆದಾರ ಎಸ್‌ಜಿ ವೆಂಕಟೇಶ್, ಡೋಜರ್ ಜಿ ಆರ್ ನಾಗರಾಜ್, ಜಿ.ಸಿ ಬಾಲರಾಜ್, ಜೆಡಿಆರ್ ತಿಪ್ಪೇಸ್ವಾಮಿ ಭೀಮಗೊಂಡನಹಳ್ಳಿ, ಕರವೇ ಕನ್ನಡ ಸೇನೆ ಹೋಬಳಿ ಘಟಕ ಅಧ್ಯಕ್ಷ ಕೆ.ಜಿ. ಮಂಜುನಾಥ್, ಸಂಗೀತ ನಿರ್ದೇಶಕರಾದ ಎಸ್. ಬಿ. ಗೋವಿಂದಪ್ಪ, ದಿವಾಕರ್, ಸೇರಿದಂತೆ ಹಳೆ ಜೋಗಿಹಟ್ಟಿ ಮತ್ತು ಹೊಸ ಜೋಗಿಹಟ್ಟಿ ಸಮಸ್ತ ಊರಿನ ಗ್ರಾಮಸ್ಥರು ವಿವಿಧ ಹಳ್ಳಿಗಳ ಕಾಲಾವಿದರು ಉಪಸ್ಥಿತರಿದ್ದರು

About The Author

Namma Challakere Local News

You missed

error: Content is protected !!