ಅಸ್ತಿ ಪಂಜರದಂತಾದ ನೀರಿನ ಟ್ಯಾಂಕಿನ ತಳ,ಅಪಾಯಕ ಆಹ್ವಾನ..
ಚಳ್ಳಕೆರೆ:
ಸಾರ್ವಜನಿಕರೇ ನೀವೇನಾದ್ರೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಗೆ ಬಂದರೆ ಮರದ ನೆರಳಿದ ಅಂತ ಇಲ್ಲಿನ ನೀರಿನ ಟ್ಯಾಂಕಿನ ಕೆಳಗೆ ಕುಳಿತುಕೊಳ್ಳಬೇಡಿ ಯಾಕಂದ್ರೆ ಇಲ್ಲಿನ ನೀರಿನ ಟ್ಯಾಂಕ್ ಸಿಥಿಲಗೊಂಡಿದ್ದು ಟ್ಯಾಂಕಿನ ತಳಭಾಗ ಸಂಪೂರ್ಣ ಅಸ್ತಿಪಂಜರದಂತಾಗಿದೆ.
ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗದಲ್ಲಿ ಈ ಶಿಥಿಲ ಗೊಂಡಿರುವ ನೀರಿನ ಟ್ಯಾಂಕ್ ಇದ್ದು ಇದು ಯಾವಾಗ ಬೇಕಾದರೂ ಬಿದ್ದು ಅಪಾಯ ತರಬಹುದು.
ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ರೋಗಗಳ ಸಂಬಂಧಿಕರು ಕುಳಿತುಕೊಳ್ಳಲು ನೆರಳು ಇದೆ ಅಂತ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಧಿಕಾರಿಗಳು ಇತ್ತ ಗಮನ ಹರಿಸಿ ಶಿಥಿಲಗೊಂಡಿರುವ ಈ ನೀರಿನ ಟ್ಯಾಂಕನ್ನು ಕೆಡವಿ ಅಪಾಯವನ್ನ ತಪ್ಪಿಸಬೇಕಿದೆ ಎನ್ನುತ್ತಾರೆ ಸಾರ್ವಜನಿಕರು…