ಚಳ್ಳಕೆರೆ : ನಗರದ ಸರ್ವತೋಮುಖ ಅಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರ ಅಗತ್ಯವಾಗಿದೆ, ಬೀದಿ ದೀಪಗಳ ಹಂಚಿಕೆ ವಿಚಾರವಾಗಿ ಸದಸ್ಯರ ಹೊಂದಾಣಿಕೆ ಮೇಲೆ ಎಲ್ಲಾ ವಾರ್ಡ್ ಗಳಿಗೂ ದೊರೆಯುವಂತೆ ಹಂಚಿಕೆ ಮಾಡಲಾಗುತ್ತದೆ ಎಂದು ನೂತನ ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ಹೇಳಿದರು.
ಅವರು ನಗರದ ನಗರಸಭೆ ಸಭಾಂಗಣದಲ್ಲಿ ತುರ್ತು ಸಭೆಯ ಅಧ್ಯಕ್ಷೆತೆ ವಹಿಸಿಕೊಂಡು ಮಾತನಾಡಿದರು, ನಗರಸಭೆ ವ್ಯಾಪ್ತಿಯಲ್ಲಿ ಬೀದಿ ದೀಪ, ರಸ್ತೆ, ಚರಂಡಿ ಈಗೇ ಮೂಲಭೂತ ಸೌಲಭ್ಯ ಕಲ್ಪಿಸುವುದು, ನಗರಸಭೆಯ ಆದ್ಯ ಕರ್ತವ್ಯವಾಗಿದೆ ಅದರಂತೆ ಸದ್ಯರು ಸಹಕಾರ ನೀಡಿದಲ್ಲಿ ಮಾದರಿ ನಗರಸಭೆ ಮಾಡಬಹುದು ಎಂದರು.
ನಗರಸಭೆ ಸದಸ್ಯೆ ಸುಜಾತ ಮಾತನಾಡಿ ನಮ್ನ ವಾರ್ಡ್ ವಿಸ್ತಾರವಾಗಿದ್ದು ಹಂಚಿಕೆ ಮಾಡಿರುವ ಬೀದಿ ದೀಪಗಳು ಸಾಕಾಗುವುದಿಲ್ಲ ಹೆಚ್ಚಿಗೆ ನೀಡುವಂತೆ ಸಭೆಯ ಗಮನ ಸೆಳೆದರು ಇದಕ್ಕೆ ಸದಸ್ಯೆ ನಾಗವೇಣಿ ಧ್ವನಿಗೂಡಿಸಿ ನಮ್ಮ ವಾರ್ಡ್ ವಿಸ್ತಾರವಾಗಿದ್ದು ನಮಗೂ ಹೆಚ್ಚಿಗೆ ಬಲ್ಪ್ ನೀಡುವಂತೆ ಒತ್ತಾಯಿಸಿದರು.
ಸದಸ್ಯ ಜಯಣ್ಣ ಮಾತನಾಡಿ ಭೂತಯ್ಯ ಲೇಹೌಟ್ .ಬೆಂಗಳೂರುರಸ್ತೆ. ವಿಠಲನಗರಕ್ಕೆ ನಗರಸಭೆಯಿಂದ ಮೂಲ ಭೂತ ಸೌಲಭ್ಯಗಳನ್ನು ನೀಡುತ್ತಿದ್ದು ಆದಾಯ ಮಾತ್ರ ನನ್ನಿವಾಳ ಹಾಗೂ ನಗರಂಗೆರೆ ಗ್ರಾಮ ಪಂಚಾಯತಿಗೆ ಹೋಗುತ್ತಿದೆ ಕೂಡಲೆ ನಗರಸಭೆಗೆ ಸೇರಿಸಿಕೊಳ್ಳವಂತೆ ಅಧಿಕಾರಿಗಳ ಗಮನ ಸೆಳೆದರು.
ನಾಮ ನಿರ್ದೇಶಕ ಸದಸ್ಯ ಪ್ರಸನ್ನ ಕುಮಾರ್, ಅನ್ವರ್ ಸಾಬ್ ಮಾತನಾಡಿ ನಗರದ ಖಾಸಗಿ ಲೇಹೌಟ್ ಗಳಲ್ಲಿನ ಉದ್ಯಾನವನಗಳು ಹಾಗೂ ಸಿ.ಎ ಸೈಟ್ ಗಳು ಕಣ್ಮರೆಯಾಗುತ್ತಿದ್ದು ಅವುಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯಬೇಕು ಉದ್ಯಾನವನಗಳ ಅಭಿವೃದ್ಧಿ ಪಡಿಸಬೇಕು, ಚಿತ್ರದುರ್ಗ ರಸ್ತೆಯ ವಿಠ್ಠಲ ನಗರದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು, ಎಂದು ಅಧಿಕಾರಿಗಳ ಗಮನ ಸೆಳೆದರು,
ಖಾಸಗಿ ನಿಲ್ದಾಣದ ಸುಂಕವಸೂಲಿ ಹಾರಾಜು ಬಗ್ಗೆ ಅಧಿಕಾರಿಗಳು ಗಮನ ಸೆಳೆದಾಗ ಸದಸ್ಯರಾದ ವಿಶು ಕುಮಾರ್ .ನಾಗವೇಣಿ ಮಾತನಾಡಿ ಕಳೆದ ಸಭೆಯಲ್ಲಿ ಸದಸ್ಯೆ ಸುಜಾತ ಖಾಸಗಿ ಬಸ್ ನಿಲ್ದಾಣಕ್ಕೆ ಬೆಳಕು.ನೆರಳು.ಕುಡಿಯುವ ನೀರು.ಮೂಲಭೂತ ಸೌಲಭ್ಯಗಳನ್ನು ನೀಡಿ ಹರಾಜು ಹಾಕುವಂತೆ ಗಮನಸೆಳೆದರೂ ಸದಸ್ಯರ ಮಾತಿಗೆ ಕವಡೆ ಕಾಸು ಕಿಮ್ಮತ್ತು ನೀಡದೆ ಮತ್ತೆ ಹರಾಜು ಮಾಡಲು ಮುಂದಾಗಿದ್ದಾರೆ ಇದಕ್ಕೆ ನಮ್ಮ ಬೆಂಬಲವಿಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸುಂಕವಸೂಲಿ ಮಾಡುವಂತೆ ಅಧಿಕಾರಿಗಳ ಗಮನ ಸೆಳೆದು ಸಭೆಯಿಂದ ನಿರ್ಗಮಿಸಿದರು.
ಇಂಜಿನಿಯರ್ ಲೋಕೇಶ್ ಮಾತನಾಡಿ ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟು ಕುಡಿಯುವ ನೀರು. ಕಾಂಪೌಂಡ್. ವಾಣಿಜ್ಯ ಮಳಿಗೆ ನೆರಳು ಮಾಡಲು4.5 ಕೋಟಿ ರೂ ಕ್ರಿಯಾಯೋಜನೆ ಟೆಂಡರ್ ಅನುಮೋದನೆಗೆ ಕಳಿಸಿದ್ದು ಬಂತ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸದಸ್ಯರಿಗೆ ಮನವರಿಕೆ ಮಾಡಿದರು.
ಸಭೆಯಲ್ಲಿ150 ಶೌಚಾಲಯ ಫಲಾನುಭವಿಗಳ ಆಯ್ಕೆ.ಬೀದಿ ದೀಪ ನಿರ್ವಹಣೆ.ಬೆಂಗಳೂರು ರಸ್ತೆಯ ಮುಖ್ಯ ರಸ್ತೆಯಲ್ಲಿ ಚರಂಡಿ .ರಸ್ತೆ ಬಾಕಿ ಇರುವ ಕಾಮಗಾರಿಗಳ ಅನುಮೋದನೆ ಪಡೆಯಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಸುಮಾ ಭರಮಣ್ಣ.ಪೌರಾಯುಕ್ತ ಜಗ್ಗರೆಡ್ಡಿ, ವ್ಯವಸ್ಥಾಪಕ ಲಿಂಗರಾಜ್ , ಇಂಜಿನಿಯರ್ ವಿನಯ್, ನರೇಂದ್ರಬಾಬು , ಸಭೆಗೆ ಮಾಹಿತಿ ನೀಡಿದರು.

